October 11, 2026
Sunday, October 11, 2026
spot_img

SHOCKING | ಶಾಲಾ ಆವರಣದಲ್ಲಿಯೇ ಏಕಾಏಕಿ ಕುಸಿದು ಬಿದ್ದ ಒಂದನೇ ಕ್ಲಾಸಿನ ಬಾಲಕ! ಹೃದಯಾಘಾತದಿಂದ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವಮೊಗ್ಗದ ಸಾಗರ ತಾಲೂಕಿನ ಹಾಳಸಸಿ ಗ್ರಾಮದಲ್ಲಿ ಆರು ವರ್ಷದ ಬಾಲಕನೊಬ್ಬ ಹೃದಯಾಘಾತಕ್ಕೆ ಬಲಿಯಾಗಿದ್ದು, ಇಡೀ ಊರು ಶಾಕ್‌ನಲ್ಲಿದೆ.

ಕೊಡವನಳ್ಳಿ ಗ್ರಾಮದ ಗೌತಮ್‌ ಜೈನ್‌ ಹಾಗೂ ಶಿಲ್ಪಾ ದಂಪತಿಯ ಪುತ್ರ ತ್ರಿಲೋಕ್‌ ಜೈನ್‌ ಹಾಳಸಸಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ.

ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ವಾಪಾಸ್‌ ಮನೆಗೆ ಹೊರಡುವ ವೇಳೆ ಶಾಲೆಯ ಆವರಣದಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ಮಾರ್ಗಮಧ್ಯ ಆತ ಮೃತಪಟ್ಟಿದ್ದಾನೆ. ಮಗುವಿಗೆ ಹೃದಯಾಘಾತವಾಗಿತ್ತು ಎಂದು ಹೇಳಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕಾರಣ ಬಹಿರಂಗವಾಗಲಿದೆ.

ಪುಟ್ಟ ಕಂದನನ್ನು ಶಾಲೆಗೆ ಕಳಿಸಿದ್ದ ಪೋಷಕರು ಆಘಾತಕ್ಕೊಳಗಾಗಿದ್ದು, ಇಡೀ ಗ್ರಾಮವೇ ದುಃಖತಪ್ತವಾಗಿದೆ.

Must Read