ದೆಹಲಿಗೆ ಹೊರಟ ವಿಮಾನ ಮತ್ತೆ ಅಮೆರಿಕಕ್ಕೆ ವಾಪಾಸ್: ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಚಿಕಾಗೋದಿಂದ ದೆಹಲಿ ಕಡೆಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನವೊಂದು (AI126)ಟೇಕಾಫ್ ಆದ ಕೆಲ ಗಂಟೆಗಳ ನಂತರ ಪುನಃ ಅಮೆರಿಕ ನಗರಕ್ಕೆ ಮರಳಿತು.

ಈ ವೇಳೆ ತಾಂತ್ರಿಕ ಕಾರಣದಿಂದ ಮರಳಿದೆ ಎಂದು ಅಂದು ವಿಮಾನಯಾನ ಸಂಸ್ಥೆ ಹೇಳಿತ್ತು.ಆದ್ರೆ ಇಷ್ಟೇಲ್ಲಾ ಆಗೋಕೆ ಕಾರಣ ಟಾಯ್ಲೆಟ್‌ (toilets) ಯಡವಟ್ಟು.

ವಿಮಾನದಲ್ಲಿದ್ದ ಟಾಯ್ಲೆಟ್‌ಗಳು ಬ್ಲಾಕ್‌ ಆಗಿ ಉಪಯೋಗಿಸಲು ಬರದಷ್ಟು ಕೆಟ್ಟಿದ್ದು. ಕಂಗಾಲಾದ ವಿಮಾನದ ಕ್ಯಾಪ್ಟನ್‌ ಹಾಗೂ ಸಿಬ್ಬಂದಿ ತಕ್ಷಣವೇ ವಿಮಾನವನ್ನ ಮತ್ತೆ ಶಿಕಾಗೋದತ್ತ ತಿರುಗಿಸಿದ್ದಾರೆ. ಇದರ ಬಗ್ಗೆ ಅಲರ್ಟ್‌ ಆದ ಪ್ರಯಾಣಿಕರು ಗಲಾಟೆ ಮಾಡಿದಾಗ ಟಾಯ್ಲೆಟ್‌ ಸಮಸ್ಯೆಯ ಬಗ್ಗೆ ಸಿಬ್ಬಂದಿ ಹೇಳಿದ್ದಾರೆ. ಮಾರ್ಚ್‌ 6ರಂದು ನಡೆದ ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.

ಚಿಕಾಗೋಕ್ಕೆ ವಾಪಸ್ಸಾದ ವಿಮಾನ ಕುರಿತು ವಿವರ ನೀಡಿರುವ ಏರ್ ಇಂಡಿಯಾ ಟೇಕಾಪ್ ಆದ ನಂತರ AI126 ನ ಏರ್ ರಿಟರ್ನ್ ಕುರಿತು ವಿವರವಾದ ಹೇಳಿಕೆಯಲ್ಲಿ, ಏರ್ ಇಂಡಿಯಾ ವಿಮಾನದ ಬಿಸಿನೆಸ್ ಮತ್ತು ಎಕಾನಮಿ ಕ್ಲಾಸ್‌ನಲ್ಲಿರುವ ಕೆಲವು ಶೌಚಾಲಯಗಳು ಸೇವೆಗೆ ಅರ್ಹವಲ್ಲ ಎಂದು ಸಿಬ್ಬಂದಿ ವರದಿ ಮಾಡಿದ ನಂತರ 12 ಶೌಚಾಲಯಗಳ ಪೈಕಿ 18 ಶೌಚಾಲಯಗಳು ಬಳಕೆಗೆ ಯೋಗ್ಯವಾಗಿರಲಿಲ್ಲ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗುತಿತ್ತು. ಆ ವೇಳೆಗೆ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಯುರೋಪ್ ಕಡೆಗೆ ತಿರುಗಿಸಲಾಯಿತು ಎಂದು ಮಾಹಿತಿ ನೀಡಿದೆ.

ಪ್ರಯಾಣಿಕರು ಶೌಚಕ್ಕೆ ಮಾತ್ರ ‘ಶೌಚಾಲಯಗಳನ್ನು ಬಳಸಬೇಕು ಎಂದಿರುವ ಏರ್ ಇಂಡಿಯಾ, ಈ ಹಿಂದೆ ಇತರ ವಿಮಾನಗಳ ಟಾಯ್ಲೆಟ್ ಗಳಲ್ಲಿ ಕಂಬಳಿಗಳು, ಒಳಉಡುಪುಗಳು ಮತ್ತು ಡೈಪರ್‌ಗಳಂತಹ ವಸ್ತುಗಳನ್ನು ಇತರ ತ್ಯಾಜ್ಯಗಳ ಜೊತೆಗೆ ಹಾಕಿರುವುದು ಕಂಡುಬಂದಿತ್ತು ಎಂದು ಹೇಳಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!