ಗುಜರಾತಿನಲ್ಲಿ ಘೋರ ಕೃತ್ಯ: 5 ವರ್ಷದ ಬಾಲಕಿಯ ಕುತ್ತಿಗೆ ಸೀಳಿ, ದೇವಾಲಯದ ಮೆಟ್ಟಿಲುಗಳಿಗೆ ರಕ್ತ ತರ್ಪಣ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐದು ವರ್ಷದ ಬಾಲಕಿಯ ಕುತ್ತಿಗೆ ಸೀಳಿಗೆ ದೇವಾಲಯದ ಮೆಟ್ಟಿಲುಗಳಿಗೆ ರಕ್ತ ತರ್ಪಣ ಮಾಡಿರುವ ಘಟನೆ ಗುಜರಾತಿನ ಛೋಟೌದೇಪುರ ಜಿಲ್ಲೆಯಲ್ಲಿ ನಡೆದಿದೆ.

ಬುಡಕಟ್ಟು ಸಮುದಾಯ ಪ್ರಾಬಲ್ಯವಿರುವ ಜಿಲ್ಲೆಯ ಪಣೆಜ್ ಗ್ರಾಮದ ಮನೆಯಿಂದ ತಾಯಿಯ ಸಮ್ಮುಖದಲ್ಲಿಯೇ ಬಾಲಕಿಯನ್ನು ಇಂದು ಬೆಳಗ್ಗೆ ಆರೋಪಿ ಲಾಲಾ ತಾಡ್ವಿ ಅಪಹರಿಸಿದ್ದಾನೆ. ನಂತರ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಕೊಡಲಿಯಿಂದ ಆಕೆಯ ಕುತ್ತಿಗೆಗೆ ಸೀಳಿ ಹತ್ಯೆ ಮಾಡಿದ್ದಾನೆ ಎಂದು ASP ಗೌರವ್ ಅಗರ್ ವಾಲ್ ತಿಳಿಸಿದ್ದಾರೆ. ಇದು ನರಬಲಿ ಪ್ರಕರಣವಾಗಿರಬಹುದು ಎಂದು ಪೊಲೀಸರು ಸೋಮವಾರ ಶಂಕಿಸಿದ್ದಾರೆ.

ಬಾಲಕಿಯ ಕುತ್ತಿಗೆಯಿಂದ ಹರಿಯುತ್ತಿದ್ದ ರಕ್ತವನ್ನು ಸಂಗ್ರಹಿಸಿದ್ದು, ತನ್ನ ಮನೆ ಸಮೀಪದ ಚಿಕ್ಕ ದೇವಾಲಯದ ಮೆಟ್ಟಿಲುಗಳಿಗೆ ತರ್ಪಣ ಮಾಡಿದ್ದಾನೆ. ಬಾಲಕಿಯ ತಾಯಿ ಮತ್ತು ಗ್ರಾಮದ ಇತರರು ಈ ಭೀಬತ್ಸ ಕೃತ್ಯವನ್ನು ನೋಡಿ ಶಾಕ್ ಆಗಿದ್ದಾರೆ. ಆದರೆ, ಆರೋಪಿ ಬಳಿ ಕೊಡಲಿ ಇದುದ್ದರಿಂದ ಏನೂ ಮಾಡದೇ ಮೂಕ ಪ್ರೇಕ್ಷಕರಾಗಿದ್ದಾರೆ.

ಕೊಲೆಯ ಹಿಂದಿನ ನಿಖರವಾದ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಯು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವಂತೆ ತೋರುತ್ತಿದೆ ಎಂದು ಅಗರ್ ವಾಲ್ ಹೇಳಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!