Saturday, April 1, 2023

Latest Posts

ಟರ್ಕಿ ಭೂಕಂಪದಲ್ಲಿ ಫುಟ್ಬಾಲ್ ಆಟಗಾರ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿ ಭೂಕಂಪದಲ್ಲಿ ದೇಶದ ಖ್ಯಾತ ಫುಟ್ಬಾಲ್ ಆಟಗಾರ ಅಹ್ಮತ್ ಎಯುಪ್ ಟುರ್ಕಸ್ಲಾನ್(28) ನಿಧನರಾಗಿದ್ದಾರೆ. ಟರ್ಕಿ-ಸಿರಿಯಾ ಭೂಕಂಪದ ತೀವ್ರತೆಗೆ ಸಾವಿನ ಸಂಖ್ಯೆ ಏರುತ್ತಲೇ ಇದೆ, ಇದೀಗ ಏಳು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಟರ್ಕಿಯ ಫುಟ್ಬಾಲ್ ಗೋಲ್‌ಕೀಪರ್ ಅಹ್ಮತ್ ಎಯುಪ್ ಟುರ್ಕಸ್ಲಾನ್ ನಿಧನರಾಗಿದ್ದಾರೆ. ಟರ್ಕಿಯ ಸೆಕೆಂಡ್ ಡಿವಿಶನ್ ಕ್ಲಬ್ ಯೇನಿ ಮಲತ್ಯಾಸ್ಟೋರ್ ಕ್ಲಬ್‌ನಲ್ಲಿ ಗೋಲ್ ಕೀಪರ್ ಆಗಿ ಆಡುತ್ತಿದ್ದರು. ನಮ್ಮ ಗೋಲ್ ಕೀಪರ್ ಅಹಮತ್ ಅವರು ಭೂಕಂಪನದಲ್ಲಿ ಜೀವ ಕಳೆದುಕೊಂಡಿದ್ದಾರೆ, ನಿಮ್ಮ ನೆನಪು ಹಸಿರಾಗೇ ಇರುತ್ತದೆ ಎಂದು ಕ್ಲಬ್ ಹೇಳಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!