Saturday, April 1, 2023

Latest Posts

ತಮ್ಮನಿಗೆ ರಕ್ಷಾ ಕವಚವಾದ ಅಕ್ಕ: ಅವಶೇಷಗಳಡಿಯಲ್ಲಿ ಸಹೋದರರನ್ನು ರಕ್ಷಿಸುವ ಪುಟ್ಟ ಹುಡುಗಿಯ ವಿಡಿಯೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಸಾವಿನ ಸಂಖ್ಯೆ 8,000ಕ್ಕೆ ತಲುಪಿದೆ. ರಕ್ಷಣಾ ಕಾರ್ಯಾಚರಣೆ ತಂಡಗಳು ಅವಶೇಷಗಳಲ್ಲಿ ಬದುಕುಳಿದವರನ್ನು ಹೊರತೆಗೆಯುವುದನ್ನು ಮುಂದುವರೆಸಿದೆ. ದುರಂತದ ಪ್ರಮಾಣವು ಹೆಚ್ಚು ಸ್ಪಷ್ಟವಾಗುತ್ತಿದ್ದಂತೆ, ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.

ಭೂಕಂಪದ ಅವಶೇಷಗಳಡಿಯಲ್ಲಿ ಏಳು ವರ್ಷದ ಬಾಲಕಿ ತನ್ನ ಕಿರಿಯ ಸಹೋದರನನ್ನು ರಕ್ಷಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಿದ್ದರೂ ತನ್ನ ಸಹೋದರನಿಗೆ ಬಾಲಕಿ ಮಾಡಿದ ಧೈರ್ಯ ಎಲ್ಲರಿಗೂ ಹೆಮ್ಮೆ ಅನಿಸುತ್ತಿದೆ.

ಅವರಿಬ್ಬರನ್ನೂ ಧೈರ್ಯಶಾಲಿ ಎಂದು ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಆ ಹುಡುಗಿ ತನ್ನ ತಮ್ಮನಿಗಾಗಿ ದಿಟ್ಟ ನಾಯಕಿಯಾಗಿ ಕಾಣಿಸಿಕೊಂಡಿದ್ದಾಳೆ. ಅವಶೇಷಗಳ ಅಡಿಯಲ್ಲಿ ಮಲಗಿದ್ದರೂ ತನ್ನ ಸಹೋದರನನ್ನು ದುರಂತದಿಂದ ರಕ್ಷಿಸಲು ತನ್ನ ತೋಳುಗಳನ್ನು ರಕ್ಷಾಕವಚವಾಗಿ ಮಾಡಿದ್ದಳು.

ತನ್ನ ಕುಸಿದ ಮನೆಯ ಅವಶೇಷಗಳಡಿಯಲ್ಲಿ ಈ ಸುಂದರ 7 ವರ್ಷದ ಸಿರಿಯನ್ ಹುಡುಗಿ ತನ್ನ ಚಿಕ್ಕ ಸಹೋದರನ ತಲೆಯ ಮೇಲೆ ತನ್ನ ಕೈಯನಿಟ್ಟು ರಕ್ಷಿಸಿದ್ದಾಳೆ. ರಕ್ಷಣಾ ಸಿಬ್ಬಂದಿ ಇಬ್ಬರು ಮುದ್ದು ಪುಟಾಣಿಗಳನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!