September 30, 2026
Wednesday, September 30, 2026
spot_img

ಅರೆ ಬೆತ್ತಲಾಗಿ ಮನೆಗಳಿಗೆ ನುಗ್ಗಿ ಜನರಿಗೆ ಕಚ್ಚಿದ ವಿದೇಶಿ ಪ್ರಜೆ: ವಾರಾಣಸಿಯಲ್ಲಿ ಭಾರೀ ಹೈಡ್ರಾಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿದೇಶಿ ಪ್ರಜೆಯೊಬ್ಬನ ವಿಚಿತ್ರ ವರ್ತನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರೆಬೆತ್ತಲಾಗಿ ಬೀದಿಗಳಲ್ಲಿ ಓಡಾಡಿದ ಆತ, ಹಲವು ಮನೆಗಳಿಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಸ್ಥಳೀಯರ ಮೇಲೂ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಮನೆಗಳಿಗೆ ನುಗ್ಗಿ ಕಚ್ಚಿದ ಆರೋಪ

ಸ್ಥಳೀಯರ ಮಾಹಿತಿ ಪ್ರಕಾರ, ವಿದೇಶಿ ಪ್ರಜೆ ವಸತಿ ಕಟ್ಟಡವೊಂದಕ್ಕೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಹೊರಗೆ ಎಸೆದಿದ್ದಾನೆ. ತಡೆಯಲು ಮುಂದಾದ ನಿವಾಸಿಯೊಬ್ಬರ ಕೈಗೆ ಕಚ್ಚಿ ಗಾಯಗೊಳಿಸಿದ್ದಾನೆ. ಅಲ್ಲದೆ, ಸುತ್ತಮುತ್ತಲಿನ ಜನರನ್ನು ಬೆನ್ನಟ್ಟಿ ಗೊಂದಲ ಸೃಷ್ಟಿಸಿದ್ದಾನೆ.

ಪೊಲೀಸರ ಕಾರ್ಯಾಚರಣೆ

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಆತ ಸಹಕರಿಸಿಲ್ಲ. ಬಳಿಕ ಸ್ಥಳೀಯರ ನೆರವಿನಿಂದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಆತ ಮಾದಕ ವಸ್ತು ಸೇವಿಸಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ, ಈ ಕುರಿತು ಅಧಿಕಾರಿಗಳು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

Must Read