ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಾಳೆಯಿಂದ ಕೃಷಿಮೇಳ ಆರಂಭವಾಗಲಿದೆ,
ಈ ಬಾರಿ ಆಹಾರ, ಆರೋಗ್ಯ ಹಾಗೂ ಆದಾಯಕ್ಕಾಗಿ ಸಿರಿಧಾನ್ಯಗಳು ಎನ್ನುವ ಘೋಷವಾಕ್ಯದಡಿ ನಾಲ್ಕು ದಿನಗಳ ಕೃಷಿ ಮೇಳವನ್ನು ಆಯೋಜಿಸಲಾಗಿದೆ.
ಈ ಬಾರಿ ಮೇಳದಲ್ಲಿ ಬಾಡಲ್ ಬದನೆ, ಚೆರಿ ಟೊಮ್ಯಾಟೊ ಅಲಂಕಾರಿಕ ಸೂರ್ಯಕಾಂತಿ ಹೂವಿನ ಪ್ರಾತಕ್ಷಿಕೆಗಳ ಪ್ರದರ್ಶನ ಮಾಡಲಾಗುವುದು. ಕಳೆದ ವರ್ಷ 17ಲಕ್ಷ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದು, 9 ಕೋಟಿಗೂ ಅಧಿಕ ವಹಿವಾಟು ನಡೆದಿತ್ತು.