July 14, 2026
Tuesday, July 14, 2026
spot_img

ಅಮ್ಮಾ ಎದೆ ಉರಿ ಎಂದು ಹೇಳುತ್ತಲೇ ಪ್ರಾಣ ಬಿಟ್ಟ ನಾಲ್ಕು ವರ್ಷದ ಬಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮ್ಮಾ ಎದೆ ಉರಿ ಆಗ್ತಿದೆ ಎಂದು ಹೇಳುತ್ತಲೇ ನಾಲ್ಕು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.

ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್‌ ಅವರ ಪುತ್ರ ವೈಷ್ಣವ್‌ ಮೃತ ಬಾಲಕ. ವೈಷ್ಣವ್‌ ಪೋಷಕರಿಗೆ ತನಗೆ ಎದೆ ಉರಿ ಆಗುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಪೋಷಕರು ಗ್ಯಾಸ್ಟ್ರಿಕ್‌ ಆಗಿರಬಹುದು ಎಂದು ಮನೆಮದ್ದು ಮಾಡಿದ್ದಾರೆ.

ಆದರೆ ಸ್ವಲ್ಪ ಸಮಯದಲ್ಲಿ ಬಾಲಕನ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪೋಷಕರು ಭಯದಿಂದ ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮಗು ಮೃತಪಟ್ಟಿದೆ.

ಈಗಷ್ಟೇ ಆಡುತ್ತಾ ಕುಳಿತಿದ್ದ ಮಗು ಇನ್ನಿಲ್ಲ ಎನ್ನುವುದನ್ನು ಪೋಷಕರು ಅರಗಿಸಿಕೊಳ್ಳಲಾಗದೇ ಆಘಾತದಲ್ಲಿದ್ದಾರೆ. ಮಗುವಿಗೆ ಹೃದಯಾಘಾತವಾಗಿರುವ ಶಂಕೆ ಎದುರಾಗಿದ್ದು, ವೈದ್ಯಕೀಯ ವರದಿಯ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !