September 11, 2026
Friday, September 11, 2026
spot_img

ಮಾಣಿಕ್ಯದಂತಹ ಮನುಷ್ಯರ ಕೈಯಲ್ಲೇ ಫೋನೇ ಮಂಗ!! ಮೊಬೈಲ್‌ ನೋಡುತ್ತಾ ಕಟ್ಟಡದಿಂದ ಬಿದ್ದ ವ್ಯಕ್ತಿಯ ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಎನ್ನುವ ಮಾತನ್ನು ಕೇಳಿರುತ್ತೀರಿ. ಆದರೆ ಮಾಣಿಕ್ಯದಂತಹ ಮನುಷ್ಯರ ಕೈಯಲ್ಲಿ ಫೋನ್‌ ಮಂಗನಂತೆ ಆಡ್ತಿರೋದು ಈಗಿನ ರಿಯಾಲಿಟಿ. ಕೈಯಲ್ಲಿ ಫೋನ್‌ ಇರುವಾಗ ತಾನು ಎಲ್ಲಿದ್ದೇನೆ, ಎಷ್ಟು ತಿಂದಿದ್ದೇನೆ, ಜೊತೆಯಲ್ಲಿ ಯಾರಿದ್ದಾರೆ ಎನ್ನುವ ವಿಷಯಗಳನ್ನು ಜನ ಮರೆತುಹೋಗಿರುತ್ತಾರೆ. ರಸ್ತೆಯ ಗುಂಡಿಗಳಲ್ಲಿ ಕಾಲಿಟ್ಟು ಬೀಳುವುದು, ಫೋನ್‌ ನೋಡುತ್ತಾ ಗಾಡಿ ಓಡಿಸಿ ಇತರರಿಗೆ ತೊಂದರೆ ಕೊಡುವ ವಿಡಿಯೋಗಳನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಫೋನ್‌ ನೋಡುತ್ತಾ ಮಹಡಿಯಿಂದಲೇ ಕೆಳಕ್ಕೆ ಬಿದ್ದಿದ್ದಾನೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ಕನ್ಸ್ಟ್ರಕ್ಷನ್‌ ನಡೆಯುತ್ತಿರುವ ಸ್ಥಳವೊಂದರಲ್ಲಿ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಮುಳುಗಿ ಕೆಳಕ್ಕೆ ಬೀಳುತ್ತಾನೆ. ಫೋನ್‌ ನೋಡುವ ಬ್ಯಸಿಯಲ್ಲಿ ತನ್ನ ಮುಂದೆ ಇರುವುದು ಏನು ಎನ್ನುವುದನ್ನೂ ಆತ ನೋಡೋದಿಲ್ಲ. ಓಪನ್‌ ಇದ್ದ ಜಾಗಕ್ಕೆ ಕಾಲಿಟ್ಟು ಕೆಳಕ್ಕೆ ಬಿದ್ದಿದ್ದಾನೆ. ತದನಂತರ ಜನ ಏನಾಯ್ತು ಎಂದು ಬಗ್ಗಿ ನೋಡಿದ್ದಾರೆ.

ಈ ಶಾಕಿಂಗ್‌ ವಿಡಿಯೋ ಸೆಕ್ಯುರಿಟಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದೆ. ಸಿವಾರ್‌ ನ್ಯೂಸ್‌ ಎಂಬ ಟ್ವಿಟರ್‌ ಅಕೌಂಟ್‌ನಲ್ಲಿ ವಿಡಿಯೋ ಪೋಸ್ಟ್‌ ಆಗಿದ್ದು,4.7 ಮಿಲಿಯನ್‌ ವ್ಯೂಸ್‌ ಪಡೆದುಕೊಂಡಿದೆ. ಜನ ಫೋನ್‌ ನೋಡುತ್ತಾ ಎಲ್ಲಿಯೂ ನಡೆಯಬಾರದು ಅನ್ನೋದಕ್ಕೆ ಇದು ದೊಡ್ಡ ಉದಾಹರಣೆಯಾಗಿದೆ. ಆ ವ್ಯಕ್ತಿ ಬದುಕುಳಿದಿದ್ದಾರಾ? ಅವರ ಕಥೆ ಏನಾಯ್ತು? ಎರಡು ಫ್ಲೋರ್‌ನಿಂದ ಬಿದ್ದರೆ ಸಾಯೋದಿಲ್ಲ ಎಂದು ಜನ ಕಮೆಂಟ್‌ ಮಾಡ್ತಿದ್ದಾರೆ. ಕೈಯಲ್ಲಿ ಫೋನ್‌ ಇಲ್ಲದೇ ಹೋಗಿದ್ದರೂ ಅಲ್ಲಿ ಹಳ್ಳದಂತಹ ಜಾಗ ಇದೆ ಅನ್ನೋದು ಗೊತ್ತಾಗ್ತಾ ಇರಲಿಲ್ಲ. ಸೈಟ್‌ ಅಂದ್ಮೇಲೆ ಸೇಫ್ಟಿ ಮೆಶರ್ಸ್‌ ಇರಬೇಕು ಎಂದು ಜನ ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !