April 11, 2026
Saturday, April 11, 2026
spot_img

VIRAL | ಪ್ರಪೋಸ್‌ ಮಾಡಿದ್ದಕ್ಕೆ ಮುಖಕ್ಕೆ ಟೀ ಎರಚಿದ ಹುಡುಗಿ, ಕೋಲಿನಿಂದ ಹೊಡೆದ ಹುಡುಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹುಡುಗರು ಪ್ರಪೋಸ್‌ ಮಾಡೋದು, ಹುಡುಗಿಯರು ರಿಜೆಕ್ಟ್‌ ಮಾಡೋದು ಮಾಮೂಲಾಗಿದೆ. ಇಷ್ಟ ಇದೆ ಎಂದು ಹೇಳಿಕೊಳ್ಳೋದು ಮಾಮೂಲಿ, ಆದರೆ ಹೇಗೆ ರಿಯಾಕ್ಟ್‌ ಮಾಡುತ್ತಾರೆ ಅನ್ನೋದು ತುಂಬಾ ಮುಖ್ಯ.

ಹರಿಯಾಣದಲ್ಲಿ ಯುವಕನೊಬ್ಬ ಯುವತಿಗೆ ಪ್ರಪೋಸ್‌ ಮಾಡಿದ್ದು, ಆಕೆ ಕೈಯಲ್ಲಿದ್ದ ಬಿಸಿ ಟೀಯನ್ನು ಆತನ ಮುಖಕ್ಕೆ ಎರಚಿದ್ದಾಳೆ. ಈ ರಿಯಾಕ್ಷನ್‌ ಕಂಡು ಯುವಕ ಶಾಕ್‌ ಆಗಿದ್ದು, ಅಲ್ಲೇ ಪಕ್ಕದಲ್ಲಿದ್ದ ಕಸ ತೆಗೆಯುವ ಕೋಲಲ್ಲಿ ಎರಡು ಬಾರಿಸಿದ್ದಾನೆ.

ಹರಿಯಾಣದಲ್ಲಿ ರಸ್ತೆಯಲ್ಲಿ ಎಲ್ಲರೆದುರು ಯುವಕ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ, ಆಗ ಆಕೆ ಅಲ್ಲೇ ಇರುವ ಟೀ ಟ್ರೇಯನ್ನು ಆತನ ಮೈಗೆ ಎಸೆದಿದ್ದಾಳೆ. ಕೂಡಲೇ ಕೋಪಗೊಂಡ ವ್ಯಕ್ತಿ ಅಲ್ಲೇ ಶುಚಿಗೊಳಿಸಲು ಇಟ್ಟಿದ ಮಾಪ್​ನ ಕೋಲಿನಿಂದ ಹೊಡೆದಿದ್ದಾನೆ. ಮಾತಿನ ಮೂಲಕ ರಿಜೆಕ್ಟ್‌ ಮಾಡಿದ್ದರೆ ಇಷ್ಟೆಲ್ಲಾ ಘಟನೆ ಮುಂದುವರಿಯುತ್ತಿರಲಿಲ್ಲ. ಯುವತಿ ಮಾಡಿದ್ದು ತಪ್ಪು ಹಾಗೇ ಯುವಕ ಮಾಡಿದ್ದು ಕೂಡ ತಪ್ಪು ಎಂದು ನೆಟ್ಟಿಗರು ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !