ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಣ್ಣಿದ್ದವರಿಗೆ ಕಣ್ಣಿಗೆ ಬಟ್ಟಿ ಕಟ್ಟಿ ಅವರ ಮನೆಯಲ್ಲಿ ಬಿಟ್ಟರೆ ನಡುರಸ್ತೆಯಲ್ಲಿ ಬಿಟ್ಟಷ್ಟು ಭಯವಾಗುತ್ತದೆ. ಕಣ್ಣು ಕಾಣದಿದ್ದರೆ ಹೇಗೆ ಅನ್ನೋ ಭಯ ಕಾಡುತ್ತದೆ.
ಆದರೆ ಇಲ್ಲೊಬ್ಬ 11ರ ಬಾಲಕ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಒಂದು ಗಂಟೆ, ಮೂರು ನಿಮಿಷ ಸೈಕಲ್ ಹೊಡೆದಿದ್ದಾನೆ.
ಸರಣ್ ದೇವ್ ಕಣ್ಣಿಗೆ ಬಟ್ಟಿ ಕಟ್ಟಿ 20 ಕಿ.ಮೀ. ಸೈಕಲ್ ಹೊಡೆದಿದ್ದಾನೆ. ಇದಕ್ಕೆ ಕಾರಣ ಕೂಡ ಇದೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳ ವಿರುದ್ಧ ಜಾಗೃತಿ ಮೂಡಿಸಲು ಈ ಬ್ಲೈಂಡ್ ಸೈಕಲ್ ರ‍್ಯಾಲಿ ಮಾಡಲಾಗಿದೆ. ಮಾರ್ಶಿಯಲ್ ಆರ್ಟ್ಸ್‌ನ ಭಾಗವಾಗಿ ಸೈಕಲ್ ರ‍್ಯಾಲಿ ಮಾಡಲಾಗಿದೆ.
ಕಳೆದ ವರ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 31 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಅಂದರೆ 2020ಕ್ಕಿಂತ ಶೇ.30ರಷ್ಟು ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಮಾನಸಿಕ ಹಿಂಸೆ, ಅತ್ಯಾಚಾರ, ದೈಹಿಕ ಹಿಂಸೆ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ ಎಲ್ಲ ರೀತಿ ಪ್ರಕರಣಗಳೂ ದಾಖಲಾಗಿವೆ. ಇದರಲ್ಲಿ ಉತ್ತರಪ್ರದೇಶದಲ್ಲಿ ಹೆಚ್ಚು ಪ್ರಕರಣಗಳಿವೆ.
ಮಹಿಳೆಯರ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಸೈಕಲ್ ಹೊಡೆದ ಬಾಲಕನಿಗೆ ಚಿನ್ನದ ಪದಕ ನೀಡಲಾಗಿದೆ. ಆ ಗೌರವವನ್ನು ಜನರಲ್ ಬಿಪಿನ್ ರಾವತ್ ಅವರಿಗೆ ಸರಣ್ ಅರ್ಪಿಸಿದ್ದಾನೆ.