ಬಡಮಕ್ಕಳಿಗೊಂದು ಸುವರ್ಣಾವಕಾಶ: ರಾಷ್ಟ್ರೋತ್ಥಾನದ ʼತಪಸ್-ಸಾಧನಾʼ ಕಲಿಕೆಗೆ ಅರ್ಜಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಷ್ಟ್ರೋತ್ಥಾನ ಪರಿಷತ್‌ ವತಿಯಿಂದ ನಡೆಸಲಾಗುವ ʼತಪಸ್‌ – ಸಾಧನಾʼ ಉಚಿತ ಶಿಕ್ಷಣ ಯೋಜನೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಪಸ್‌ ಯೋಜನೆಯ ಅಡಿಯಲ್ಲಿ ಗಂಡು ಮಕ್ಕಳಿಗೆ ಹಾಗೂ ಸಾಧನಾ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ರಾಷ್ಟ್ರೋತ್ಥಾನ ಪರಿಷತ್‌ ವತಿಯಿಂದ ನೀಡಲಾಗುತ್ತದೆ.

ಈ ಯೋಜನೆಗಳ ಅಡಿಯಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ಪಿಯುಸಿ ಶಿಕ್ಷಣದೊಂದಿಗೆ ಐಐಟಿ, ಜೆಇಇ, ನೀಟ್‌ ಪರೀಕ್ಷೆಗಳಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಕಲಿಕೆಗೆ ಸೇರಲಿಚ್ಛಿಸುವ ಅರ್ಹ ಬಡ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ 10 ನೇ ತರಗತಿ ಓದುತ್ತಿರುವ ಮಕ್ಕಳು ಅರ್ಜಿಸಲ್ಲಿಸ ಬಹುದಾಗಿದೆ. ಡಿಸೆಂಬರ್‌ 25ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು ಅರ್ಜಿಗಳನ್ನು ಡಿ.10ರ ಒಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.tapassaadhana.org ವೆಬ್ಸೈಟ್‌ ಗೆ ಭೇಟಿ ನೀಡಬಹುದಾಗಿದ್ದು ಅಥವಾ ದೂರವಾಣಿ ಸಂಖ್ಯೆ 9481201144 / 9844602529 / 7975913828 ಗೆ ಸಂಪರ್ಕಿಸಲು ಕೋರಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!