ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದ ಶಹಜಹಾನ್‌ಪುರದ ಕಬ್ಬಿನ ಗದ್ದೆಯಲ್ಲಿ 12 ವರ್ಷದ ಬಾಲಕಿಯೊಬ್ಬಳು ಕುತ್ತಿಗೆಗೆ ಬಿಗಿದ ಗುರುತುಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಪುಷ್ಪಾ ಅಲಿಯಾಸ್ ರಜನಿ ಎಂದು ಗುರುತಿಸಲಾಗಿದೆ. ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗುವ ಮೊದಲು ಆಕೆ ತನ್ನ ಅಜ್ಜಿಯೊಂದಿಗೆ ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದಳು. ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
”ಕಬ್ಬಿನ ಗದ್ದೆಯಲ್ಲಿ ಪುಷ್ಪಾ ಅಲಿಯಾಸ್ ರಜನಿ ಎಂದು ಗುರುತಿಸಲಾದ 12 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಆಕೆ ತನ್ನ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಗದ್ದೆಯಲ್ಲಿ ಹುಲ್ಲು ಕೊಯ್ಯುತ್ತಿದ್ದಳು ಎಂಬ ಮಾಹಿತಿಯೂ ಸಿಕ್ಕಿದೆ. ಆಕೆಯ ಅಜ್ಜಿ ಹುಲ್ಲಿನ ಹೊರೆಯೊಂದಿಗೆ ಮನೆಗೆ ಬಂದಿದ್ದಾರೆ. ಅವರ ಹಿಂದೆಯೇ ಬರಬೇಕಿದ್ದ ಬಾಲಕಿ ಮನೆಗೆ ಹಿಂತಿರುಗಲಿಲ್ಲ. ಕಾದು ಕಾದು ಅಜ್ಜಿ ಹುಡುಕಾಟ ಆರಂಭಿಸಿದ್ದು, ಜಮೀನಿನಲ್ಲಿ ಗ್ರಾಮಸ್ಥರ ಸಹಾಯದಿಂದ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ. ಕತ್ತು ಹಿಸುಕಿ ಕೊಲೆ ಮಾಡಿರುವ ಗುರುತು ಇದೆ. ಈ ವೇಳೆ ಆಕೆಯ ಕೈಗಳನ್ನು ಹಿಂಬದಿಯಿಂದ ಕಟ್ಟಲಾಗಿತ್ತು. ಆಕೆಯ ಬಟ್ಟೆಗಳು ಹಾಗೇ ಇದ್ದವು, ವಿಧಿವಿಜ್ಞಾನದ ತಂಡವು ಸ್ಥಳದದಲ್ಲಿ ಪರಿಶೀಲಿಸುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ತನಿಖೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಶಹಜಹಾನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ತಿಳಿಸಿದ್ದಾರೆ.