ಆ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ: 12 ಕಿ.ಮೀ ದೂರದಿಂದ ಬಂದು ಬೋಧಿಸುತ್ತಿರುವ ಶಿಕ್ಷಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದು ಕಾಲದಲ್ಲಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದವು. ಬರುಬರುತ್ತಾ ಶಿಕ್ಷಣ ಖಾಸಗೀಕರಣವಾದಂತೆಲ್ಲಾ ಸರ್ಕಾರಿ ಶಾಲೆಯಲ್ಲಿ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಹಲವು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ, ಮುಚ್ಚುತ್ತಿವೆ ಕೂಡ. ಆದರೆ ಮಹಾರಾಷ್ಟ್ರದ ಈ ಶಾಲೆ ಮಾತ್ರ ಎಲ್ಲಕ್ಕಿಂತ ಭಿನ್ನವಾಗಿವೆ. ಸತತ ಎರಡು ವರ್ಷಗಳಿಂದ ಒಬ್ಬ ವಿದ್ಯಾರ್ಥಿಗಾಗಿ ಶಾಲೆ ನಡೆಯುತ್ತಿದೆ.

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದು ಕೇವಲ ಒಬ್ಬ ವಿದ್ಯಾರ್ಥಿಗಾಗಿಯೇ ನಡೆಯುತ್ತಿದೆ. ಇದು ಒಂದು ದಿನವೂ ಸ್ಥಗಿತಗೊಳ್ಳದೆ ಚಾಲನೆಯಲ್ಲಿದೆ. ಅವನಿಗೆ ಕಲಿಸಲು ಒಬ್ಬ ಶಿಕ್ಷಕ ಪ್ರತಿದಿನ 12 ಕಿಲೋಮೀಟರ್ ದೂರದಿಂದ ಬರುತ್ತಾರೆ. ವಾಶಿಮ್ ಜಿಲ್ಲೆಯ ಗಣೇಶಪುರದಲ್ಲಿ 150 ಜನರು ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆ ಇದೆ. ಇದು 1 ನೇ ತರಗತಿಯಿಂದ 4 ನೇ ತರಗತಿಯವರೆಗೆ ಕಲಿಸುತ್ತದೆ. ಆದರೆ ಕಾರ್ತಿಕ್ ಶೇಗ್ ಕರ್ ಎಂಬ ವಿದ್ಯಾರ್ಥಿ ಮಾತ್ರ ಆ ಶಾಲೆಯಲ್ಲಿ ಓದುತ್ತಿದ್ದಾನೆ. ಒಬ್ಬನೇ ವಿದ್ಯಾರ್ಥಿ ಇರುವುದರಿಂದ ಜಿಲ್ಲಾಡಳಿತ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸದೆ ಅವರಿಗಾಗಿಯೇ ಶಾಲೆ ನಡೆಸುತ್ತಿದೆ. ಅದಲ್ಲದೆ, ಹುಡುಗನಿಗೆ ಮಧ್ಯಾಹ್ನದ ಊಟ ಮತ್ತು ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ.

ಕಿಶೋರ್ ಮಾನಕರ್ ಎಂಬ ವ್ಯಕ್ತಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕ ಕಿಶೋರ್ ಅವರಿಗೆ ಎಲ್ಲ ವಿಷಯಗಳನ್ನೂ ಹೇಳಿಕೊಡುತ್ತಿದ್ದಾರೆ. ಕಾರ್ತಿಕ್ ಅವರು ಪ್ರತಿದಿನ ಶಾಲೆಗೆ ಬರುತ್ತಾರೆ ಮತ್ತು ಅವರು ಬೆಳಿಗ್ಗೆ ಇಬ್ಬರೂ ಒಟ್ಟಿಗೆ ಪ್ರಾರ್ಥನೆ ಮಾಡುತ್ತಾರೆ ಇವರಿಗೆ ಶಾಲೆಯಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎನ್ನಲಾಗಿದೆ. ಎರಡು ವರ್ಷಗಳಿಂದ ಶಾಲೆಯಲ್ಲಿ ಈ ವಿದ್ಯಾರ್ಥಿ ಮಾತ್ರ ಹೆಸರು ನೋಂದಾಯಿಸಿಕೊಂಡು ಬರುತ್ತಿದ್ದಾನೆ ಎಂದು ಶಿಕ್ಷಕ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!