Friday, February 3, 2023

Latest Posts

ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿದ ರಾಧಿಕಾ ಮರ್ಚೆಂಟ್​​ -ಅನಂತ್​ ಅಂಬಾನಿ ನಿಶ್ಚಿತಾರ್ಥ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉದ್ಯಮಿ ಮುಕೇಶ್​ ಅಂಬಾನಿ ಮತ್ತು ನಿತಾ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ಉದ್ಯಮಿ ವಿರೇನ್​ ಮರ್ಚೆಂಟ್​ ಮತ್ತು ಶೈಲಾ ಮರ್ಚೆಂಟ್​​ ಅವರ ಮಗಳಾದ ರಾಧಿಕಾ ಮರ್ಚೆಂಟ್​ ಅವರ ನಿಶ್ಚಿತಾರ್ಥ ಗುರುವಾರ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ರಾಜಸ್ಥಾನದ ಪ್ರಖ್ಯಾತ ಶ್ರೀನಾಥ್​​ಜೀ ದೇಗುಲದಲ್ಲಿ ನಿಶ್ಚಿತಾರ್ಥ ನೇರವೇರಿತು. ಅನಂತ್​ ಮತ್ತು ರಾಧಿಕಾ ಇಬ್ಬರು ಹಲವು ದಿನಗಳಿಂದ ಪರಿಚಿತರಾಗಿದ್ದರು. ನಿಶ್ಚಿತಾರ್ಥದ ಬಳಿಕ ಅವರು ದೇಗುಲದದಲ್ಲಿ ನಡೆದ ರಾಜ್​ ಬೋಗ್​​ ಶೃಂಗಾರ್​ ಕಾರ್ಯಕ್ರಮದಲ್ಲಿ ಭಾಗಿಯಾದರು. ಜೀವನದ ಹೊಸ ಅಧ್ಯಯನ ಪ್ರಾರಂಭಿಸಲು ಮುಂದಾಗಿರುವ ಜೋಡಿಗೆ ನೆರೆದ ಜನರು ಶುಭ ಹಾರೈಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!