September 15, 2026
Tuesday, September 15, 2026
spot_img

‘ಡಂಕಿ’ ನಂತ್ರ ಮತ್ತೊಮ್ಮೆ ಗ್ರ್ಯಾಂಡ್ ಕಂಬ್ಯಾಕ್: ಕ್ರಿಸ್‌ಮಸ್ ಹಬ್ಬಕ್ಕೆ SRK ಎಂಟ್ರಿ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಫ್ಯಾನ್ಸ್‌ಗೆ ಒಂದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಶಾರುಖ್ ಅವರ ‘ಕಿಂಗ್’ ಸಿನಿಮಾ ಮುಂದೆ ಹೋಗುತ್ತೆ, ಪೋಸ್ಟ್‌ಪೋನ್ ಆಗುತ್ತೆ ಎಂದು ಏನೇನೋ ರೂಮರ್ಸ್ ಹರಿದಾಡ್ತಿದ್ವು. ಆದ್ರೆ ಈಗ ಸ್ವತಃ ಶಾರುಖ್ ಖಾನ್ ಅವರೇ ಬಂದು, “ಏನೂ ಪೋಸ್ಟ್‌ಪೋನ್ ಆಗಿಲ್ಲ, ಪಕ್ಕಾ ಪ್ಲಾನ್ ಪ್ರಕಾರ ಡಿಸೆಂಬರ್ 24, 2026ಕ್ಕೆ ಸಿನಿಮಾ ಥಿಯೇಟರ್‌ಗೆ ಬರೋದು ಗ್ಯಾರಂಟಿ!” ಎಂದು ಎಲ್ಲ ರೂಮರ್ಸ್‌ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

2023ರಲ್ಲಿ ಬಂದ ‘ಡಂಕಿ’ ನಂತ್ರ ಶಾರುಖ್ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಈ ‘ಕಿಂಗ್’ ಸಿನಿಮಾ ಮೇಲಿನ ಎಕ್ಸ್‌ಪೆಕ್ಟೇಷನ್ ಬೇರೆನೇ ಲೆವೆಲ್‌ನಲ್ಲಿದೆ. ಇನ್ನೊಂದ್ ಕಡೆ ಅದೇ ಕ್ರಿಸ್‌ಮಸ್ ಟೈಮ್‌ನಲ್ಲಿ ಹಾಲಿವುಡ್ ದೊಡ್ಡ ದೊಡ್ಡ ಸಿನಿಮಾಗಳಾದ ‘ಅವೆಂಜರ್ಸ್: ಡೂಮ್ಸ್‌ಡೇ’ ಮತ್ತೆ ‘ಡ್ಯೂನ್ 3’ ಡಿಸೆಂಬರ್ 18ಕ್ಕೆ ರಿಲೀಸ್ ಆಗ್ತಿವೆ. ಬಾಕ್ಸ್ ಆಫೀಸ್‌ನಲ್ಲಿ ಕಾಂಪಿಟೇಷನ್‌ಗೆ ಬಂದರೂ, ‘ಕಿಂಗ್’ ಸಿಂಗಲ್ ಆಗಿ ನಿಂತು ಮುಖಾಮುಖಿ ಆಗೋಕೆ ರೆಡಿಯಾಗಿದ್ದಾನೆ. ಶಾರುಖ್ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಕೂಡ “KING akela kaafi hai!” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

https://www.instagram.com/reel/DdTc9nbMMsM/?utm_source=ig_web_button_share_sheet

ಸಿನಿಮಾದಲ್ಲಿ ಹೆವಿ ಆಕ್ಷನ್ ಸೀನ್‌ಗಳಿದ್ದ ಕಾರಣ ಶೂಟಿಂಗ್ ಟೈಮ್‌ನಲ್ಲಿ ಶಾರುಖ್‌ಗೆ ಒಂದೆರಡು ಬಾರಿ ಏಟು ಬಿದ್ದು ಗಾಯಗಳಾಗಿದ್ದವಂತೆ. ಅದಕ್ಕೇ ಶೂಟಿಂಗ್ ಸ್ವಲ್ಪ ಬ್ರೇಕ್ ತಗೊಂಡು ತಗೊಂಡು ನಡೀತು. ಆದ್ರೆ ಈಗ “ಬ್ರೋಕನ್ ಎಲ್ಲವೂ ಫಿಕ್ಸ್ ಆಗಿದೆ, ಶೂಟಿಂಗ್ ಕಂಪ್ಲೀಟ್ ಆಗೋ ಹಂತದಲ್ಲಿದೆ, ನಾನೀಗ ಫುಲ್ ಫಿಟ್!” ಎಂದು ಫ್ಯಾನ್ಸ್‌ಗೆ ಧೈರ್ಯ ಹೇಳಿದ್ದಾರೆ ಶಾರುಖ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !