ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಕೋಲಾ: ಪರ್ತಗಾಳಿ ಜೀವೋತ್ತಮ ಮಠದ ಪೀಠಾದಿಪತಿ ಶ್ರೀ ವಿದ್ಯಾಧೀಶತೀರ್ಥ ವಡೇರ ಸ್ವಾಮೀಜಿಯವರು ಶ್ರೀಮಠದ ಶಾಖಾ ಮಠ ಅಂಕೋಲಾ ತಾಲೂಕಿನ ವೀರ ವಿಠ್ಠಲ ಮಠಕ್ಕೆ ಆಗಮಿಸಿದರು.
ತಾಲೂಕಿನ ಗೌಡ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ಮಠಾಕೇರಿ ಕ್ರಾಸಿನಲ್ಲಿ ಭವ್ಯ ಸ್ವಾಗತ ಕಮಾನು ನಿರ್ಮಿಸಿ ವಿವಿಧ ವಾದ್ಯಗಳೊಂದಿಗೆ ಸ್ವಾಮೀಜಿಯವರಿಗೆ ಭವ್ಯ ಸ್ವಾಗತ ಕೋರಲಾಯಿತು.
ವೀರ ಮಠಕ್ಕೆ ಆಗಮಿಸಿದ ಸ್ವಾಮೀಜಿಯವರಿಗೆ ಮಠದ ಅರ್ಚಕರು ಪಾದ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು , ವೀರ ವಿಠ್ಠಲ ಮಠದ ಪ್ರಮುಖರು ಸ್ವಾಮೀಜಿಯವರ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಅಭಿವೃದ್ಧಿಯ ಹರಿಕಾರ ಎಂದೇ ಕರೆಯಲ್ಪಡುವ ಸ್ವಾಮೀಜಿಯವರು ನವೆಂಬರ್ 28 ರ ವರೆಗೆ ಅಂಕೋಲಾದ ವೀರ ವಿಠ್ಠಲ ಶಾಖಾ ಮಠದಲ್ಲಿ ಉಪಸ್ಥಿತರಿದ್ದು ಮಠದ ಮತ್ತು ಸಮಾಜದ ಅಭಿವೃದ್ಧಿ ಕುರಿತು ಚಿಂತನೆಗಳನ್ನು ನಡೆಸಲಿದ್ದಾರೆ.