ದಿನಭವಿಷ್ಯ| ಕೆಲವು ವಿಚಾರಗಳ ಕುರಿತು ಕುಟುಂಬದಲ್ಲಿ ಮುಕ್ತ ಮಾತುಕತೆ ಒಳಿತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಜವಾದ ಸ್ನೇಹಿತರು, ಬಂಧುಗಳು ಯಾರು ಎಂಬ ಅರಿವು ಆಗಲಿದೆ. ಸಹಾಯಕ್ಕೆ ಬರುವವರೇ ನಿಜವಾದ ಬಂಧುಗಳು. ಉಳಿದವರ ನಿಜಬಣ್ಣ ಬಯಲಾಗುವುದು.

ವೃಷಭ
ಪ್ರೀತಿಯ ಮಾತಿನಿಂದ ಎಲ್ಲರನ್ನು ಗೆಲ್ಲಿರಿ. ವ್ಯವಹಾರಕ್ಕೂ ಅದು ಸಹಕಾರಿ. ಬಿರುಸು ಧೋರಣೆ , ಅಧಿಕಾರ ಚಲಾವಣೆ ನಿರೀಕ್ಷಿತ ಫಲ ನೀಡಲಾರದು.

ಮಿಥುನ
ಕೆಲವು ವಿಚಾರಗಳ ಕುರಿತು ಕುಟುಂಬದಲ್ಲಿ ಮುಕ್ತ ಮಾತುಕತೆ ಒಳಿತು. ಅದರಿಂದ ಭಿನ್ನಾಭಿಪ್ರಾಯ ನಿವಾರಣೆ ಆದೀತು. ಆರ್ಥಿಕ ಹೊರೆ ಹೆಚ್ಚು.

ಕಟಕ
ಆದ್ಯತೆಯ ಕೆಲಸಕ್ಕೆ ಮೊದಲು ಗಮನ ಹರಿಸಿ. ಅದನ್ನು ಪೂರೈಸದೆ ಬಿಟ್ಟರೆ ಕಷ್ಟಕ್ಕೆ ಸಿಲುಕುವಿರಿ. ವ್ಯಕ್ತಿಯೊಬ್ಬರು ನಿಮಗೆ ಮಾನಸಿಕ ಹಿಂಸೆಗೆ ಕಾರಣರಾಗುತ್ತಾರೆ.

ಸಿಂಹ
ವ್ಯವಹಾರದಲ್ಲಿ ಇಂದು ತೀವ್ರ ಸ್ಪರ್ಧೆ ಎದುರಿಸುವಿರಿ. ನಿಮ್ಮ ಕಾರ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕು. ಬೇಕಾಬಿಟ್ಟಿ ಕಾರ್ಯ ಮಾಡದಿರಿ.

ಕನ್ಯಾ
ಆತ್ಮೀಯ ಸಂಬಂಧ  ಮಹತ್ತರ ತಿರುವು ಪಡೆಯಬಹುದು. ಅದಕ್ಕೆ ಸಿದ್ಧರಾಗಿರಿ. ಅದು ಪೂರಕವೂ ಆದೀತು, ಪ್ರತಿಕೂಲವೂ ಆದೀತು.
ಸಂಯಮವಿರಲಿ.

ತುಲಾ
ನಿಮ್ಮ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಯ ಜತೆ ಕಳೆಯುವ ಅವಕಾಶ. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರಕುವುದು. ಕೌಟುಂಬಿಕ ನಿರಾಶೆ ನಿವಾರಣೆ.

ವೃಶ್ಚಿಕ
ನಿಮ್ಮ ಮೇಲಧಿಕಾರಿಯನ್ನು  ಮೆಚ್ಚಿಸಲು ಸಫಲರಾಗುವಿರಿ. ಇದು ನಿಮಗೆ ಲಾಭ ತರಲಿದೆ. ಕೌಟಂಬಿಕ ಸನ್ನಿವೇಶವೊಂದು ಗಾಬರಿ ಸೃಷ್ಟಿಸಬಹುದು.

ಧನು
ಅನವಶ್ಯ ಖರ್ಚು ಒದಗಿಬರುವುದು. ವೃತ್ತಿ ಕ್ಷೇತ್ರದಲ್ಲಿ  ಶಿಸ್ತು ತರಲು ಹೆಣಗಾಡುವಿರಿ. ನಿಮ್ಮ ಆಶಯಗಳಿಗೆ ಇತರರ ಬೆಂಬಲ ದೊರಕದೆ ಹತಾಶೆ.

ಮಕರ
ನಿಮ್ಮ ಕಠಿಣ ಶ್ರಮವೆಲ್ಲ ಮಣ್ಣುಪಾಲಾದ ಅನಿಸಿಕೆ ಇಂದು ಮೂಡುವುದು. ಅದಕ್ಕೆ ಕಾರಣ ನೀವು ಬಯಸಿದ್ದು ಈಡೇರದಿರುವುದು. ನಿರಾಶವಾದ ಬೇಡ.

ಕುಂಭ
ಬಾಕಿ ಉಳಿದಿರುವ ಕಾರ್ಯ ಪೂರೈಸ ಬೇಕಾದ ಒತ್ತಡಕ್ಕೆ ಸಿಲುಕುವಿರಿ. ಆದರೆ ಸೂಕ್ತ ಸಹಕಾರದ ಕೊರತೆ. ದಿನದಂತ್ಯಕ್ಕೆ ಮತ್ತೆ ನಿರಾಶೆ.

ಮೀನ
ವೃತ್ತಿಯಲ್ಲಿ ಕೆಲವು ತಪ್ಪುಗಳನ್ನು ಸರಿಪಡಿಸಬೇಕಾದ ಹೊಣೆ ನಿಮ್ಮದು. ತಪ್ಪು ಸಣ್ಣದಾದರೂ ಮುಂದೆ ಅದು ದೊಡ್ಡ ಪರಿಣಾಮ ಉಂಟುಮಾಡೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!