Saturday, June 10, 2023

Latest Posts

ಐದು ಮಕ್ಕಳಿಗೆ ಜನ್ಮ ನೀಡಿದ ‘ಮಹಾ’ತಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ನ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಟ್ವಿನ್ಸ್ ಡೆಲಿವರಿ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸುವಾಗ, ಆಸ್ಪತ್ರೆಯಲ್ಲಿ ಐದು ಮಕ್ಕಳು ಜನಿಸಿದ ವಿಷಯದಿಂದ ಎಲ್ಲರಿಗೂ ಅಚ್ಚರಿಯಾಗಿದೆ. ಐದು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

ಮಕ್ಕಳನ್ನು ಸದ್ಯಕ್ಕೆ ನಿಕ್ಯುನಲ್ಲಿ ಇರಿಸಲಾಗಿದ್ದು, ಆಸ್ಪತ್ರೆಯಲ್ಲಿ ಮಕ್ಕಳನ್ನು ನೋಡಲು ಜನ ಕಾತರರಾಗಿದ್ದಾರೆ. ಐದು ಮಕ್ಕಳಿದ್ದ ಕಾರಣ ಎಲ್ಲ ಮಕ್ಕಳೂ ಕಡಿಮೆ ತೂಕವನ್ನು ಹೊಂದಿದ್ದಾರೆ. ಹಾಗಾಗಿ ಇನ್ನೂ ಕೆಲವು ದಿನ ನಿಕ್ಯೂನಲ್ಲಿ ಮಕ್ಕಳನ್ನು ಇರಿಸಲಾಗುವುದು. ಆರೋಗ್ಯಕರ ತೂಕ ಬಂದ ನಂತರ ಮನೆಗೆ ಕಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!