Wednesday, June 7, 2023

Latest Posts

ಅಂಡರ್​​​ಪಾಸ್ ಅವಘಡದಿಂದ ಎಚ್ಚೆತ್ತ ಬಿಬಿಎಂಪಿ: ಪಾಲಿಕೆ ತೆಗೆದುಕೊಂಡಿರುವ ಮಹತ್ವದ ಕ್ರಮಗಳು ಹೀಗಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕೆಲವು ಅಂಡರ್​ಪಾಸ್​ಗಳು ಮೃತ್ಯುಕೂಪಗಳಾಗುತ್ತಿವೆ. ಭಾನುವಾರ (ಮೇ 21) ಕೆ.ಆರ್​.ವೃತ್ತದ ಅಂಡರ್​ಪಾಸ್​ನ ನೀರಿನಲ್ಲಿ ಕಾರು ಸಿಲುಕಿಕೊಂಡು ಅದರಲ್ಲಿದ್ದ ಮಹಿಳಾ ಟೆಕ್ಕಿ ಭಾನುರೇಖಾ ಮೃತಪಟ್ಟಿದ್ದರು. ಅದೃಷ್ಟವಶಾತ್​ ಇನ್ನುಳಿದ ಅವರ ಕುಟುಂಬದ ಸದಸ್ಯರ ಪಾರಾಗಿದ್ದರು. ಇದೀಗ ಈ ಅವಘಡದಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಐಐಎಸ್‌ಸಿ ತಜ್ಞರ ಮೊರೆ ಹೋಗಿದೆ. ಮುಖ್ಯವಾಗಿ ಅಂಡರ್‌ ಪಾಸ್‌ಗಳ ಕಾರ್ಯಕ್ಷಮತೆ ಬಗ್ಗೆ ಅಧ್ಯಯನ ಮಾಡುವಂತೆ ಹೇಳಿದೆ.

ಬೆಂಗಳೂರಿನ ಎಲ್ಲ ಅಂಡರ್​ಪಾಸ್ ಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಬಿಬಿಎಂಪಿ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಇದೀಗ ಎಲ್ಲ ಅಂಡರ್​ಪಾಸ್​ಗಳ ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಹಲವಾರು ಕ್ರಮ ಕೈಗೊಳ್ಳಲಿದೆ.

ಬಿಬಿಎಂಪಿ ತೆಗೆದುಕೊಂಡಿರುವ ಮಹತ್ವದ ಕ್ರಮಗಳು ಹೀಗಿವೆ:

1 . ರಸ್ತೆಯ ಅಕ್ಕ ಪಕ್ಕದಲ್ಲಿ ಬೀಳುವ ಎಲ್ಲಾ ಮಳೆ ನೀರು ಕೆಳಸೇತುವೆಗೆ ಹೋಗದಂತೆ ಕೆಳಸೇತುವೆಯ ಏರುವ ಮತ್ತು ಇಳಿಯುವ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿಯನ್ನು ನಿರ್ಮಿಸಿ ನೇರವಾಗಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವುದು.

2. ರಸ್ತೆಯ ಮೇಲಿನ ಮಳೆ ನೀರು ಕೆಳಸೇತುವೆಗೆ ಹೋಗದಂತೆ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕವಾಗಿ ಚರಂಡಿಯನ್ನು ನಿರ್ಮಿಸುವ ಜೊತೆಗೆ ಒಂದು ರಸ್ತೆ ಉಬ್ಬರವನ್ನು ಸಹ ನಿರ್ಮಿಸುವುದು.

3. ಕೆಳಸೇತುವೆಯ ಕೆಳಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಗಳನ್ನು ಅಳವಡಿಸುವುದು.

4. Vertical Clearance Gauge Beam ಅನ್ನು ಆಳವಡಿಸಿ ಅತೀ ಪ್ರವಾಹ ಉಂಟಾದ ತುರ್ತು ಸಂಧರ್ಭಗಳಲ್ಲಿ ಒಂದು ಬೂಮ್​ ಬ್ಯಾರಿಯರ್​ ಅನ್ನು ಸಹ ನಿರ್ಮಿಸುವುದು ಮತ್ತು ಅಗತ್ಯ ಸಂದರ್ಭದಲ್ಲಿ ಬಳಸುವುದು.

5. ಕೆಳಸೇತುವೆಯ ವಾಹನ ನಿರ್ಬಂಧ ಪಡಿಸುವ ಕ್ರಮವನ್ನು ಸಂಚಾರ ಪೋಲಿಸ್ ಇಲಾಖೆಯ ಸಹಯೋಗದಿಂದ ನಿರ್ವಹಣೆ ಮಾಡುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!