ದಸರಾದ ಯುವ ಸಂಭ್ರಮದಲ್ಲಿ ಜನಪದ ಸೊಗಡಿಗೆ ಮನಸೋತ ಯುವ ಸಮೂಹ

ಹೊಸದಿಗಂತ ವರದಿ ಮೈಸೂರು:

ಕಾರ್ಮೊಡದ ನಡೆವೆಯೂ ಡೊಳ್ಳು ಕುಣಿತ, ವೀರಗಾಸೆ, ತಮಟೆ ಕುಣಿತ ಯುವ ಸಮೂಹ ಮೈಮರೆತು ಹುಚ್ಚೆದ್ದು ಕುಣಿಯುವಂತೆ ಮಾಡಿದ ಕನ್ನಡ ನಾಡಿನ ಜನಪದ ಕಲೆಗೆ ಹಾಗೂ ಸಂಸ್ಕೃತಿಗೆ ಯುವ ಸಮೂಹ ಮೈರೆತು ಹೋಯಿತು.

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಬಯಲು ರಂಗಮoದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮದಲ್ಲಿ ವಿವಿಧ ಜಿಲ್ಲೆಗಳ ಕಾಲೇಜಿನ ವಿದ್ಯಾರ್ಥಿಗಳು ಯುವ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಹೆಜ್ಜೆ ಹಾಕಿದರು.

ಹುಣಸೂರಿನ ಗೌಡಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಸೇರಿದಂತೆ ಸಂರ್ಪೂ ಜಾನಪದ ಕಲೆಯನ್ನು ನೆರೆದಿದ್ದ ಯುವ ಸಮೂಹಕ್ಕೆ ತಮ್ಮ ಮನಮೋಹಕ ನೃತ್ಯದ ಮೂಲಕ ನೆರೆದಿದ್ದ ಜನರನ್ನು ಮನರಂಜಿಸಿದರು.

ಮೈಸೂರಿನ ಎ.ಟಿ.ಎಂ.ಇ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿಗಳು ತುಳುನಾಡಿನ ಯಕ್ಷಗಾನ ಕಲೆ, ಕರಾವಳಿಯ ಹುಲಿ ಕುಣಿತ, ಕೊಡಗಿನ ನೃತ್ಯ ಸೇರಿದಂತೆ ಕನ್ನಡ ನಾಡಿನ ವಿವಿಧ ಜಿಲ್ಲೆಗಳ ನ ಸೊಬಗನ್ನು ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರು.
ಇತ್ತೀಚೆಗೆ ಯುವ ಸಮೂಹ ಪುಸ್ತಕಗಳಿಗಿಂತ ಮೊಬೈಲ್ ಗೆ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಅದರಿಂದಾಗುತ್ತಿರುವ ಕೆಡಕುಗಳ ಬಗ್ಗೆ ಯುವ ಸಮೂಹಕ್ಕೆ ನೃತ್ಯದ ಮೂಲಕ ಸಂದೇಶವನ್ನು ಮೈಸೂರಿನ ಜೆ.ಎಸ್.ಎಸ್.ಪದವಿ ಪರ್ವೂ ಕಾಲೇಜಿನ ವಿದ್ಯಾರ್ಥಿಗಳು ನೀಡಿದರು.

ನಾಗಮಂಗಲದ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಡಾ.ಪುನೀತ್ ರಾಜ್ ಕುಮಾರ್ ಚಿತ್ರದ ಹುಡುಗುರು ಚಿತ್ರದ ಎನ್ ಚೆಂದನೆ ಹುಡುಗಿ ಗಲ್ಲು ಗಲ್ಲು ಎನುತಾವು ಗೆಜ್ಜೆ , ರಾಜಕುಮಾರ ಚಿತ್ರದ ಬೊಂಬೆ ಹೆಳುತೈತೆ ಎಂಬ ಹಾಡಿಗೆ ಪುನೀತ್ ಭಾವ ಚಿತ್ರ ಹಿಡಿದು ನರ್ತಿಸುತ್ತಂದತೆ ನೆರೆದಿದ್ದ ಯುವ ಸಮೂಹಗಳಲ್ಲಿ ಮಿಂಚಿನ ಸಂಚಾರವಾಯಿತು.

ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರೆಟ್ರೊ ಟು ಮೆಟ್ರೊ ಎಂಬ ಪರಿಕಲ್ಪನೆಯಡಿ ದರ್ಶನ್ ಚಿತ್ರಗಿತೆಗಳಿಗೆ ಹೆಜ್ಜೆ ಹಾಕಿದರೆ, ಮಹಾರಜ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ರೈತರ ಬಗ್ಗೆ ತಿಳಿಸಿದರು.
ಮಂಡ್ಯದ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ನೃತ್ಯ ಪ್ರದರ್ಶನದ ಮೂಲಕ ಪರಿಸರದ ಮಹತ್ವವನ್ನು ತಿಳಿಸಿದರು. ಡಾ.ಲೊಕೇಶ್ ಅವರು ಮಿಲನ ಚಿತ್ರದ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಹಾಗೂ ಅಣ್ಣಾಬಾಂಡ್ ಚಿತ್ರದ ಕಾಣದಂತೆ ಮಾಯವಾದನು ನಮ್ಮ ಶಿವ ಎಂಬ ಗೀತೆಯನ್ನು ಹಾಡಿ ಯುವ ಸಮೂಹವನ್ನು ರಂಜಿಸಿದರು.

ಹುಣಸೂರಿನ ವಿ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾರತದ ರಾಷ್ಟçಧ್ವಜದ ಇತಿಹಾಸ ಬಗ್ಗೆ ಹಾಗೂ ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ಬಗ್ಗೆ ಅದ್ಭುತವಾಗಿ ನರ್ತಿಸುವ ಮೂಲಕ ನೋಡುಗರ ಮುಂದೆ ಪ್ರದರ್ಶಿಸಿದರು. ದೆವಲಾಪುರದ ಜೆ.ಎಸ್.ಎಸ್.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಟಿ.ನರಸೀಪುರದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆಯ ಕಾಲೇಜಿನ ದೇಶದ ಯೋದರ ಸಾಹಸವನ್ನು ಹಾಗೂ ರೈತರ ಶ್ರಮವನ್ನು ಹಾಗೂ ನಿಸ್ವಾರ್ಥ ಸೇವೆಯನ್ನು ನರ್ತಿಸುವ ಮೂಲಕ ಮನಮೋಹಕವಾಗಿ ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.

ನಗರದ ಮಾತೃಮಂಡಳಿ ಶಿಶುವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳು ನವದುರ್ಗೆಯರ ಅವರತಾರದ ಬಗ್ಗೆ ಸಭಿಕರ ಮುಂದೆ ಪ್ರದರ್ಶಿಸಿ ಎಲ್ಲರನ್ನು ಬೆರಗುಗೊಳಿಸಿದರು. ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಜನಪದದ ಪರಂಪರೆ ಬಗ್ಗೆ ಹಾಗೂ ದೇಶಿ ಸಂಸ್ಕೃತಿಯ ಬಗ್ಗೆ ಜೋಗಿ ಚಿತ್ರದ ಏಳು ಮ್ಯಾಲೆರಿ ಎಂಬ ಹಾಡಿಗೆ ಹೆಜ್ಜೆ ಹಾಕಿ ನೆರೆದಿದ್ದ ಯುವ ಸಮೂಹವನ್ನು ಕುಣಿಯುವಂತೆ ಮಾಡಿದರು.

ನಂಜನಗೂಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶಿವನನ್ನೆ ಧರೆಗಿಳಿಸುವಂತೆ ಶಿವನ ಹಾಡುಗಳಿಗೆ ನಯನ ಮನಹೋರವಾಗಿ ನರ್ತಿಸುದ್ದಂತೆ ಶಿಳ್ಳೆ ಚಪ್ಪಾಳೆ ಮುಗಿಲು ಮುಟ್ಟಿತು. ಗುಂಡ್ಲುಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕವು ಎಲ್ಲ ಜನರು ಸಾಮರಸ್ಯದಿಂದ ಕೂಡಿರುವ ಬಗ್ಗೆ ಹಾಗೂ ಕಾಡಿನ ಮಹತ್ವವನ್ನು, ಕಾವೇರಿ ನದಿಯ ಅಗತ್ಯವನ್ನು ಅದ್ಭುತವಾಗಿ ತಿಳಿಸಿದರು.

ಮೈಸೂರಿನ ರಾಮನ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಝಾನ್ಸಿ ರಾಣಿ ಲಕ್ಷಿ÷್ಮಭಾಯಿಯ ಸಾಹಸದ ಬಗ್ಗೆ ಹಾಗೂ ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ಹೋರಾಡಿದ್ದರ ಬಗ್ಗೆ ನೃತ್ಯದ ಮೂಲಕ ನೆರೆದಿದ್ದ ಜನರ ಬಗ್ಗೆ ಕಣ್ಣಮುಂದೆ ತಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!