ಊಟ ಮಾಡುತ್ತಾ ನಿಂತಿದ್ದವರ ಮೇಲೆ ಬಿತ್ತು ಭಾರೀ ಗಾತ್ರದ ವಾಟರ್ ಟ್ಯಾಂಕ್ : ಸ್ಥಳದಲ್ಲೇ ಇಬ್ಬರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾವು ಹೇಗೆಲ್ಲಾ ಬರುತ್ತದೆ ಎಂದು ಊಹಿಸಲು ಅಸಾಧ್ಯ, ದಣಿದು ಬಂದ ವ್ಯಕ್ತಿಯೊಬ್ಬ ಹಸಿವಾಗಿ ಅಲ್ಲೇ ಕಂಡ ಎಗ್‌ರೈಸ್ ಗಾಡಿ ಮುಂದೆ ಗಾಡಿ ನಿಲ್ಲಿಸ್ತಾನೆ, ಎಗ್‌ರೈಸ್ ಆರ್ಡರ್ ಮಾಡುತ್ತಾನೆ.
ಇತ್ತ ಮೊದಲ ಕಸ್ಟಮರ್ ಬಂದರು ಅನ್ನೋ ಖುಷಿಯಲ್ಲಿ ಅಂಗಡಿಯಾತ ಬೇಗನೆ ಎಗ್‌ರೈಸ್ ಹಾಕಿ ಕೊಡ್ತಾರೆ, ಗ್ರಾಹಕ ತಿನ್ನುವಾಗ ಎಲ್ಲಿಂದಲೋ ದೊಪ್ಪೆಂದು ನೀರು ತುಂಬಿದ್ದ ವಾಟರ್ ಟ್ಯಾಂಕ್ ತಲೆ ಮೇಲೆ ಬೀಳುತ್ತದೆ.

ಇದು ಕಥೆಯಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ದುರ್ಘಟನೆ. ಬಸ್ ನಿಲ್ದಾಣದ ಬಳಿ ಎಗ್‌ರೈಸ್ ಮಾರುತ್ತಿದ್ದ ಹಾಗೂ ಎಗ್‌ರೈಸ್ ತಿನ್ನುತ್ತಿದ್ದ ವ್ಯಕ್ತಿ ತಲೆಯ ಮೇಲೆ ನಾಲ್ಕು ಅಂತಸ್ತಿನಲ್ಲಿದ್ದ ವಾಟರ್ ಟ್ಯಾಂಕ್ ಬಿದ್ದಿದ್ದು, ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ.

ಸಿಂಟ್ಯಾಕ್ಸ್ ಹಳೆಯದಾಗಿದ್ದು, ನೀರು ಸತತವಾಗಿ ಲೀಕ್ ಆಗುತ್ತಲೇ ಇತ್ತು. ಇದರಿಂದ ಗೋಡೆ ಹಸಿಯಾಗಿ ಗೋಡೆ ಸಮೇತ ಟ್ಯಾಂಕ್ ಕುಸಿದು ಬಿದ್ದಿದೆ. ಎಗ್‌ರೈಸ್ ಅಂಗಡಿ ಇಟ್ಟಿದ್ದ ಅರುಳ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ, ಘಟನೆಯಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಟ್ಯಾಂಕರ್ ನಿಲ್ಲಿಸಿದ್ದ ಗೋಡೆ ಅವೈಜ್ಞಾನಿಕವಾಗಿ ಕಟ್ಟಿರುವ ಸಾಧ್ಯತೆ ಇದೆ ಹೀಗಾಗಿ ಅವಗಢ ಸಂಭವಿಸಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!