ಮಧ್ಯಪ್ರದೇಶಕ್ಕೆ ಇಂದು ರಾಷ್ಟ್ರಪತಿ ಭೇಟಿ: ಹೊಸ ಅಧ್ಯಾಯ ಬರೆಯಲಿದೆ ಅಂತಾರಾಷ್ಟ್ರೀಯ ಸಾಹಿತ್ಯ ಉತ್ಸವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಂತಾರಾಷ್ಟ್ರೀಯ ಸಾಹಿತ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಭೋಪಾಲ್‌ನಲ್ಲಿ ನಡೆಯುತ್ತಿರುವ ‘ಉನ್ಮೇಶಾ’ -ಅಂತರಾಷ್ಟ್ರೀಯ ಸಾಹಿತ್ಯ ಉತ್ಸವ ಮತ್ತು ‘ಉತ್ಕರ್ಷ್’ – ಜಾನಪದ ಮತ್ತು ಬುಡಕಟ್ಟು ಪ್ರದರ್ಶನ ಕಲೆಗಳ ಉತ್ಸವವನ್ನು ಅವರು ಉದ್ಘಾಟಿಸಲಿದ್ದಾರೆ. ಸಾಹಿತ್ಯ ಅಕಾಡೆಮಿ ಮತ್ತು ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಸಂಸ್ಕೃತಿ ಸಚಿವಾಲಯವು ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಈ ಸಂದರ್ಭದಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತಿತರರು ಭಾಗವಹಿಸಲಿದ್ದಾರೆ.

ಮೂರು ರಾಜ್ಯಗಳ ರಾಜ್ಯಪಾಲರು – ಆರಿಫ್ ಮೊಹಮ್ಮದ್ ಖಾನ್ (ಕೇರಳ), ಬಿಸ್ವ ಭೂಷಣ್ ಹರಿಚಂದನ್ (ಛತ್ತೀಸ್‌ಗಢ), ಮತ್ತು ತಮಿಳಿಸೈ ಸೌಂದರರಾಜನ್ (ತೆಲಂಗಾಣ) ಕೂಡ ಅಭಿವ್ಯಕ್ತಿ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕಾರ್ಯಕ್ರಮದಲ್ಲಿ 102 ಭಾಷೆಗಳಿಂದ 575ಕ್ಕೂ ಹೆಚ್ಚು ಲೇಖಕರು ಮತ್ತು 13 ದೇಶಗಳ ಲೇಖಕರು ಕೂಡ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!