August 27, 2026
Thursday, August 27, 2026
spot_img

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಮಹಾ ದಾಖಲೆ: ಫ್ರಾನ್ಸ್ ಮಣಿಸಿ 3ನೇ ಸ್ಥಾನ ಮುಡಿಗೇರಿಸಿಕೊಂಡ ಇಂಗ್ಲೆಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026 ರ ಫಿಫಾ ವಿಶ್ವಕಪ್‌ನ ಮೂರನೇ ಸ್ಥಾನಕ್ಕಾಗಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಫ್ರಾನ್ಸ್ ವಿರುದ್ಧ 6-4 ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇಆಫ್ ಪಂದ್ಯವೊಂದರಲ್ಲಿ ಬರೋಬ್ಬರಿ 10 ಗೋಲುಗಳು ದಾಖಲಾಗುವ ಮೂಲಕ ಫುಟ್‌ಬಾಲ್ ಪ್ರೇಮಿಗಳು ರೋಮಾಂಚನಗೊಂಡಿದ್ದಾರೆ.

ಮೊದಲಾರ್ಧದಲ್ಲಿ ಇಂಗ್ಲೆಂಡ್ ಅಬ್ಬರ

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಇಂಗ್ಲೆಂಡ್, ಬುಕಾಯೊ ಸಾಕಾ ಅವರ ಆಕರ್ಷಕ ಎರಡು ಗೋಲುಗಳು ಹಾಗೂ ಡೆಕ್ಲಾನ್ ರೈಸ್ ಮತ್ತು ಎಜ್ರಿ ಕೊನ್ಸಾ ಅವರ ತಲಾ ಒಂದು ಗೋಲಿನ ನೆರವಿನಿಂದ ಮೊದಲಾರ್ಧದಲ್ಲೇ 4-0 ರ ಭರ್ಜರಿ ಮುನ್ನಡೆ ಕಾಯ್ದುಕೊಂಡಿತು.

ಫ್ರಾನ್ಸ್ ಟೀಮ್ ಕಂಬ್ಯಾಕ್ ಫೈಟ್

ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಫ್ರಾನ್ಸ್ ಪರ ಕೈಲಿಯನ್ ಎಂಬಾಪೆ ಬ್ಯಾಕ್-ಟು-ಬ್ಯಾಕ್ ಎರಡು ಗೋಲು ಬಾರಿಸಿದರು. ಜೊತೆಗೆ ಬ್ರಾಡ್ಲಿ ಬಾರ್ಕೋಲಾ ಒಂದು ಗೋಲು ಗಳಿಸಿದ್ದರಿಂದ ಪಂದ್ಯದ ಸ್ಕೋರ್ 4-3 ಕ್ಕೆ ತಲುಪಿ ತೀವ್ರ ಕುತೂಹಲ ಮೂಡಿಸಿತು.

ಹ್ಯಾಟ್ರಿಕ್ ಗೋಲು ಮತ್ತು ಜಯದ ನಗೆ

ಈ ಹಂತದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಬುಕಾಯೊ ಸಾಕಾ ಪೆನಾಲ್ಟಿ ಮೂಲಕ ತಮ್ಮ ಹ್ಯಾಟ್ರಿಕ್ ಗೋಲು ಪೂರ್ಣಗೊಳಿಸಿದರು. ಫ್ರಾನ್ಸ್‌ನ ಔಸ್ಮಾನೆ ಡೆಂಬೆಲೆ ಮತ್ತೊಂದು ಗೋಲು ಗಳಿಸಿ ಕಠಿಣ ಪೈಪೋಟಿ ನೀಡಿದರಾದರೂ, ಅಂತಿಮ ಕ್ಷಣದಲ್ಲಿ ಜೂಡ್ ಬೆಲ್ಲಿಂಗ್ಹ್ಯಾಮ್ ಇಂಗ್ಲೆಂಡ್ ಪರ 6ನೇ ಗೋಲು ಬಾರಿಸಿ ಜಯ ಖಚಿತಪಡಿಸಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ 2026 ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !