September 14, 2026
Monday, September 14, 2026
spot_img

ರಾಷ್ಟ್ರ ರಾಜಧಾನಿಯತ್ತ ಸಚಿವಾಕಾಂಕ್ಷಿಗಳ ದಂಡು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮತ್ತೆ ಸಚಿವಾಕಾಂಕ್ಷಿಗಳ ದಂಡು ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದು, ಈ ಬೆನ್ನಲ್ಲೇ ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಬಾರಿ ಶಾಸಕರಾದವರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ ಈ ಕುರಿತು ನಿರ್ಧಾರ ಮಾಡುವುದು ಸಿಎಂ ಮತ್ತು ಹೈಕಮಾಂಡ್ ಎಂದು ತಿಳಿಸಿದರು.

ಸಹಜವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಹಿರಿಯರು ರಾಜೀನಾಮೆ ನೀಡಬೇಕು ಎಂದು ಹೇಳಿದರೆ ನಾನಾಗಲಿ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಎಚ್‌.ಕೆ.ಪಾಟೀಲ್‌ ಸೇರಿ ಹಿರಿಯ ಸಚಿವರು ಯಾವ ಪ್ರಶ್ನೆ ಮಾಡದೇ ರಾಜೀನಾಮೆ ನೀಡಬೇಕಾಗುತ್ತೆ ಎಂದು ಹೇಳಿದರು.

ಹೀಗಾಗಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಹೊಸಬರಿಗೆ ಅವಕಾಶ ಸಿಗಬೇಕು. ಪ್ರತಿ ಬಾರಿ ಸಂಪುಟ ಪುನರ್‌ ರಚನೆ ಮಾಡುವಾಗಲೂ ಕೆಲ ಹಿರಿಯರನ್ನು ಉಳಿಸಿಕೊಂಡು ಕಿರಿಯರಿಗೆ ಅವಕಾಶ ಕಲ್ಪಿಸುವುದು ಸಾಮಾನ್ಯ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !