ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಲಿವ್ ಇನ್ ಪಾರ್ಟ್‌ನರ್‌ನ್ನು ಕೊಂದ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ.
32 ವರ್ಷದ ಸರಸ್ವತಿ ವೈದ್ಯ ಎಂಬಾಕೆಯನ್ನು ಮನೋಜ್ ಸಾನೆ ಎಂಬ ವ್ಯಕ್ತಿ ಕೊಂದು ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈತ ಪೊಲೀಸರ ಬಳಿ ನಾನು ಕೊಲೆ ಮಾಡಿಯೇ ಇಲ್ಲ ಎಂದಿದ್ದಾನೆ.
ಸರಸ್ವತಿ ವೈದ್ಯರನ್ನು ನಾನು ಪ್ರೀತಿಸುತ್ತಿದ್ದೆ, ಆದರೆ ಅವರನ್ನು ನಾನು ಕೊಲೆ ಮಾಡಿಲ್ಲ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆ ಕೇಸ್ ನನ್ನ ತಲೆಗೆ ಬರುತ್ತದೆ ಎನ್ನುವ ಭಯಕ್ಕೆ ಮೃತಪಟ್ಟಿದ್ದ ಅವರ ದೇಹವನ್ನು ಕತ್ತರಿಸಿದೆ ಎಂದಿದ್ದಾರೆ. ಆಕೆಯ ದೇಹವನ್ನು ಬೇಯಿಸಿ ನಂತರ ನಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.