ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳು ಈಜಿಪ್ಟ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ, ಇದೇ ಮೊದಲ ಬಾರಿಗೆ ಪ್ರಧಾನಿ ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಹೂಡಿಕೆ, ಕೃಷಿ, ವ್ಯಾಪಾರ ಹಾಗೂ ರಕ್ಷಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಇರುವ ಭೇಟಿ ಇದಾಗಿದೆ.
ಪ್ರಧಾನಿ ಮೋದಿಯವರ ಈಜಿಪ್ಟ್ ಪ್ರವಾಸದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅರಬ್ ಜಗತ್ತು ಮತ್ತು ಆಫ್ರಿಕಾ ಎರಡರ ಅರಾಜಕೀಯದಲ್ಲಿ ಪ್ರಮುಖ ರಾಷ್ಟ್ರವಾಗಿರುವ ಈಜಿಪ್ಟ್‌ನೊಂದಿಗೆ ಇನ್ನಷ್ಟು ಬಾಂಧವ್ಯ ಹೆಚ್ಚಿಸಲು ಭಾರತ ಉತ್ಸುಕವಾಗಿದೆ.