ಹೊಸದಿಗಂತ ಕಲಬುರಗಿ:
ಹಗ್ಗದಿಂದ ಉಸಿರುಗಟ್ಟಿಸಿ ಬಳಿಕ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನೇ ಪತಿ ಭೀಕರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವದಲ್ಲಿ ನಡೆದಿದೆ.
ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದ ನಾಗಮ್ಮಾ (42) ಮೃತಪಟ್ಟಿರುವ ದುರ್ದೈವಿಯಾಗಿದ್ದು,ಕಳೆದ ರಾತ್ರಿ ಎರಡು ಬಾರಿ ಸಂಭೋಗಕ್ಕಾಗಿ ಹೆಂಡತಿಗೆ ಒತ್ತಾಯ ಮಾಡಿದ್ದನು.ಆದರೆ, ಗಂಡನ ಒತ್ತಾಯಕ್ಕೆ ಒಪ್ಪದ ಹಿನ್ನೆಲೆ ಪಾಪಿ ಪತಿಯಾದ ಶೇಖಪ್ಪಾ ನಿಂದ ಪತ್ನಿಯ ಕೊಲೆಯಾಗಿದೆ.
ಸಂಭೋಗಕ್ಕಾಗಿ ಒಪ್ಪಿಕೋ ಇಲ್ಲವಾದಲ್ಲಿ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಆವಾಜ್ ಹಾಕಿದ್ದಾನೆ. ನೋಡಣ ಕೊಚ್ಚಿ ಹಾಕೆಂದು ಪತ್ನಿ ಹೇಳಿದ ಕ್ಷಣವೇ ಕೊಡಲಿಯಿಂದ ಕೊಚ್ಚಿ ಹಾಕಿದ್ದಾನೆ. ಪತ್ನಿ ನಾಗಮ್ಮಳ ಹತ್ಯೆ ಮಾಡಿದ ಬಳಿಕ ಪತಿ ಶೇಖಪ್ಪಾ ನೇರವಾಗಿ ಬಂದು ಪೋಲಿಸ್ ಠಾಣೆಗೆ ಸರೇಂಡರ್ ಆಗಿದ್ದಾನೆ.
ಈ ಕುರಿತು ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.