ಗೋಕರ್ಣ ಪ್ರವಾಸಕ್ಕೆ ಬಂದ ಜಪಾನ್ ಮಹಿಳೆ ನಾಪತ್ತೆ

ಹೊಸದಿಗಂತ ವರದಿ: ಗೋಕರ್ಣ:

ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಜಪಾನ ಮಹಿಳೆ ನಾಪತ್ತೆಯಾಗಿದ್ದು ಈ ಮಹಿಳೆ ಎಲ್ಲಿಯಾದರೂ ಸಾರ್ವಜನಿಕರು ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಗೋಕರ್ಣ ಠಾಣೆಗೆ ತಿಳಿಸುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇಲ್ಲಿನ ಬಂಗ್ಲೆಗುಡ್ಡೆಯ ವಸತಿ ಗೃಹದಲ್ಲಿ ತನ್ನ ಪತಿಯೊಂದಿಗೆ ತಂಗಿದ್ದ ಎಮಿ ಯಮಾಝಾಕಿ (೪೩) ನಾಪತ್ತೆಯಾದ ಮಹಿಳೆಯಾಗಿದ್ದು, ಹೊರಹೋಗಿ ಬರುತ್ತೇನೆ ಎಂದು ಹೋದವಳು ಬಂದಿಲ್ಲ. ಈಕೆಯನ್ನು ಹುಡುಕಿಕೊಡುವಂತೆ ಇವಳ ಪತಿ ಡೈ ಯಮಾಝಾಕಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪತ್ತೆ ಕಾರ್ಯ ಚರುಕುಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!