ಯಾವುದೇ ಸರ್ಕಾರ ಇರಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು: ಸ್ಪೀಕರ್ ಯು.ಟಿ ಖಾದರ್

ಹೊಸದಿಗಂತ ವರದಿ: ರಾಯಚೂರು :

ಅಧಿಕಾರದಲ್ಲಿರುವ ಎಲ್ಲ ಸರ್ಕಾರಗಳು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ ಎಂದು ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಹೇಳಿದರು.

ಸ್ಥಳೀಯ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರೀಯಿಸಿ. ನಾನು ಸಭಾಪತಿಯಾಗಿದ್ದೇನೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎರಡೂ ಒಂದೆ. ಎಲ್ಲಾ ಶಾಸಕರನ್ನು ಸಮಾನತೆಯಿಂದ ನೋಡಿಕೊಳ್ಳುವುದು. ಸದನವನ್ನು ಸಮರ್ಪಕ ಚರ್ಚೆಗೆ ಅನುಗುಣವಾಗಿ ಒಳ್ಳೆಯ ಕಾನೂನು, ಯೋಜನೆಗಳನ್ನು ರೂಪಿಸಿ, ಉತ್ತಮ ವಾತಾವರಣ ನಿರ್ಮಾಣ ಮಾಡುವುದು ನನ್ನ ಕೆಲಸ ಎಂದರು.

ಶಾಸಕರಾದ ಮೇಲೆ ಶಾಸಕಾಂಗ ಸಭೆಗೆ ಹಾಜರಾಗಬೇಕು. ಇದನ್ನು ಎಲ್ಲ ಶಾಸಕರು ಅರ್ಥ ಮಾಡಿಕೊಳ್ಳಬೇಕು. ಜನರು ಆಯ್ಕೆ ಮಾಡಿಕಳಿಸಿದ್ದಾರೆ ಎಂದರೆ ಅವರು ಶಾಸಕಾಂಗ ಸಬೇಯಲ್ಲಿ ಭಾಗವಹಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡುವುದಲ್ಲದೇ ಸರಿಯಾದ ಸಮಯಕ್ಕೆ ಆಗಮಿಸಿ ಕೊನೆಯವರೆಗೂ ಕುಳಿತುಕೊಳ್ಳಬೇಕೆನ್ನುವುದು ಮತದಾರರ ಆಶಯವಾಗಿರುತ್ತದೆ. ಬೇರೆಲ್ಲ ಕೆಲಸಗಳನ್ನು ಬದಿಗಿಟ್ಟು ಮತದಾರರು ಕೊಟ್ಟ ಗೌರವಕ್ಕೆ ಭಾಗವಹಿಸುತ್ತೇನೆ ಎಂಬ ಆತ್ಮ ವಿಶ್ವಾಸ ಅವರಲ್ಲಿ ಇರಬೇಕು ಎಂದು ತಿಳಿಸಿದರು.

ರಾಜಕೀಯ ಪ್ರತಿನಿಧಿ ಆದ ನಂತರ ಎರಡು ಕರ್ತವ್ಯಗಳನ್ನು ಪಾಲಿಸಬೇಕು. ಮೊದಲನೆಯದು ಜನರ ಕಷ್ಟಗಳನ್ನು ಸದನದಲ್ಲಿ ಪ್ರತಿಪಾದಿಸುವುದು. ಎರಡನೆಯದುಹಿರಿಯ ನಾಯಕರು ಮಾತನಾಡುವುದನ್ನು ಆಲಿಸಿ ಚರ್ಚೆಯಲ್ಲಿ ಭಾಗವಹಿಸಿದಾಗ ಮಾತ್ರ ಜನಪ್ರತಿನಿಧಿ ಆಗಿದಕ್ಕೂ ಸಾರ್ಥಕವಾಗುತ್ತದೆ. ಎಷ್ಟೋ ಜನಪ್ರತಿನಿಧಿಗಳು ಆಗಿ ಹಓಗಿದ್ದಾರೆ ಆದರೆ ಸತತವಾಗಿ ಸದನಕ್ಕೆ ಬರುವವರು ಮತ್ತು ಚರ್ಚೆಗಳಲ್ಲಿ ಭಾಗವಹಿಸುವವರು ಮಾತ್ರ ಯಶಸ್ವಿಯಾಗಿದ್ದಾರೆ ಎಂದರು.

ಸದನಕ್ಕೆ ಒಂದು ಬಾರಿ ಮತ್ತು ಹತ್ತು ಬಾರಿ ಬಂದವರಿಗೂ ಬಹುಮಾನಗಳನ್ನು ನೀಡಿದ್ದೇವೆ . ಈ ಬಾರಿಯೂ ಬಹುಮಾನಗಳನ್ನು ನೀಡುತ್ತೇವೆ. ಮುಂದಿನ ಬಾರಿ ಬದಲಾವಣೆ ಮಾಡಲಾಗುವುದು. ರಾಜ್ಯದ ವಿಧಾನಸಭೆಯನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ವಿಧಾನಸೌಧ ರಾಜ್ಯದ ಎಲ್ಲ ಸಮುದಾಯಗಳ, ಪ್ರತಿಯೊಬ್ಬರ ವಿಧಾಸಭೆಯಾಗಬೇಕು ಎನ್ನುವ ಆಶಯ ಹೊಂದಲಾಗಿದೆ. ವಿಧಾನಸಭೆ ನಾವು ನೋಡುವಂತಹುದಲ್ಲ ಎಂಬ ಭಾವನೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯಲ್ಲಿಯೂ ಬರಬಾರದು ಎನ್ನುವುದು ನಮ್ಮದಾಗಿದೆ ಎಂದು ತಿಳಿಸಿದರು.

ಪ್ರಸಕ್ತ ಅಧಿವೇಶನ ವೀಕ್ಷಣೆಗೆ ಸಂದರ್ಭದಲ್ಲಿ ಒಂದು ದಿನ ಕೂಲಿ ಕಆರ್ಮಿಕರು, ಒಂದು ದಿನ ಮಹಿಳೆಯರು, ಒಂದು ದಿನ ಯುವಕರು, ಒದು ದಿನ ಪೌರ ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಅಧಿವೇಶನ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!