ನೇಪಾಳದ ನದಿಯಲ್ಲಿ ಭಾರತದ ನಂಬರ್ ಪ್ಲೇಟ್ ಇರುವ ಜೀಪ್ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್ ಪ್ಲೇಟ್ ಇರುವ ಜೀಪ್ ಪತ್ತೆಯಾಗಿದ್ದು, ಪೊಲೀಸರು ವಾಹನವನ್ನು ಮೇಲಕ್ಕೆತ್ತಿಸಿದ್ದಾರೆ.

ನೇಪಾಳ ಪೊಲೀಸರಿಗೆ ಚಿತ್ವಾನ್ ಜಿಲ್ಲೆಯ ಜನರು ಯಾವುದೋ ವಾಹನ ನದಿಗೆ ಬಿದ್ದಿದೆ ಎಂದು ಕರೆ ಮಾಡಿದ್ದಾರೆ. ಜನರ ಶಂಕೆ ಆಧರಿಸಿ ಹುಟುಕಾಟ ನಡೆಸಿದ್ದು, ಭಾರತದ ನಂಬರ್ ಪ್ಲೇಟ್ ಇರುವ ಜೀಪ್ ಪತ್ತೆಯಾಗಿದೆ.

ರಸ್ತೆಯಿಂದ ನೇರವಾಗಿ ಜೀಪ್ ನದಿಯ ಆಳಕ್ಕೆ ಬಿದ್ದಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಈ ಜೀಪ್ ಯಾರದ್ದು? ವಾಹನದಲ್ಲಿ ಇದ್ದವರು ಏನಾದರು? ಜೀಪ್ ಬ್ರೇಕ್ ವ್ಯವಸ್ಥೆಗೆ ಏನಾಗಿತ್ತು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈವರೆಗೂ ನದಿಯಲ್ಲಿ ಯಾವುದೇ ಮೃತದೇಹ ಪತ್ತೆಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!