CRICKET | ಭಾರತ-ಇಂಗ್ಲೆಂಡ್ ಪಂದ್ಯ: ಸೈನಿಕರ ಕುಟುಂಬಗಳಿಗೆ ಉಚಿತ ಪ್ರವೇಶ…!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ಜನವರಿ 25 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯದ ಎರಡನೇ ದಿನದಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯ ಕುಟುಂಬಗಳಿಗೆ ಉಚಿತ ಪ್ರವೇಶವನ್ನು ಘೋಷಿಸಿದೆ.

2024 ರಲ್ಲಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯ ಕುಟುಂಬಗಳಿಗೆ ನಾವು ಉಚಿತ ಪ್ರವೇಶವನ್ನು ಒದಗಿಸುತ್ತೇವೆ. ಭಾರತೀಯ ಸೈನಿಕರ ಕುಟುಂಬಗಳನ್ನು ಗೌರವಿಸಲು HCA ನಿರ್ಧರಿಸಿದೆ. ಇದರೊಂದಿಗೆ ಭಾರತೀಯ ಸಶಸ್ತ್ರ ಪಡೆ ಸಿಬ್ಬಂದಿಯ ಕುಟುಂಬಗಳಿಗೆ ಗಣರಾಜ್ಯೋತ್ಸವ ದಿನದಂದು ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಂಗೆ ಉಚಿತ ಪ್ರವೇಶವಿರುತ್ತದೆ.

ಮೊದಲ ಟೆಸ್ಟ್ ಪಂದ್ಯದ ಟಿಕೆಟ್‌ಗಳು ಜನವರಿ 18 ರಿಂದ Paytm ಇನ್‌ಸೈಡರ್ ಅಪ್ಲಿಕೇಶನ್ ಮತ್ತು www.insider.in ನಲ್ಲಿ ಲಭ್ಯವಿರುತ್ತವೆ. ಆಫ್‌ಲೈನ್ ಟಿಕೆಟ್ ಮಾರಾಟವು ಜನವರಿ 22 ರಂದು ಜಿಮ್ಖಾನಾದಲ್ಲಿ ಪ್ರಾರಂಭವಾಗಲಿದೆ. ಇಲ್ಲಿ ದಿನದ ಟಿಕೆಟ್ ದರ ₹ 200 ರಿಂದ ₹ 4000 ರಷ್ಟಿದೆ. ವಿಶೇಷವೆಂದರೆ ಭಾರತೀಯ ಸಶಸ್ತ್ರ ಪಡೆಗಳ ಸದಸ್ಯರ ಕುಟುಂಬಗಳಿಗೆ ಒಂದು ದಿನದ ಮಟ್ಟಿಗೆ ಉಚಿತ ಪ್ರವೇಶವನ್ನು ಒದಗಿಸಲು HCA ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!