ಹೊಸದಿಗಂತ ವರದಿ,ಮದ್ದೂರು :
ತಾಲೂಕಿನ ದೇಶಹಳ್ಳಿ ಕಬ್ಬಿನ ಗದ್ದೆಯಲ್ಲಿ ಉರುಳಿಗೆ ಚಿರತೆ-ಮುಳ್ಳಂದಿ ಶುಕ್ರವಾರ ಸೆರೆಯಾಗಿದೆ.
ಕಬ್ಬಿನ ಗದ್ದೆಯಲ್ಲಿ ಮುಳ್ಳಂದಿಯನ್ನು ಬೇಟೆಯಾಡಲು ಚಿರತೆ ಬಂದ ಸಂರ್ದರ್ಭದಲ್ಲಿ ಬಲೆಗೆ ಹಾಕಿದ್ದ ಉರುಳಿಗೆ ಸಿಕ್ಕಿಹಾಕಿಕೊಂಡು ಮುಂದೆ ಹೋಗಲು ಸಾಧ್ಯವಾಗಿಲ್ಲ. ಚಿರತೆಯೊಂದಿಗೆ ಮುಳ್ಳಂದಿಯು ಬಲೆಗೆ ಸಿಕ್ಕಿ ಹಾಕಿಕೊಂಡಿದೆ.
ಉರುಳಿಗೆ ಸಿಕ್ಕಿಹಾಕಿಕೊಂಡು ಹಿನ್ನೆಲೆಯಲ್ಲಿ ಚಿರತೆ ಹಾಗೂ ಮುಳ್ಳಂದಿ ಎರಡು ಪ್ರಾಣಿಗೂ ಗಾಯವಾಗಿರುವುದರಿಂದ ಮೈಸೂರಿನ ಕೂರ್ಗಳ್ಳಿ ಪುನರ್ ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಿಡಲಾಗಿದೆ.
ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಪ್ಪ, ತಾಲೂಕು ವಲಯ ಅರಣ್ಯ ಅಧಿಕಾರಿ ಕವಿಯಪ್ಪ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೋವಿಂದು. ಮೈಸೂರು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮುಜೀಬ್ ರವರು ಸ್ಥಳಕ್ಕೆ ಆಗಮಿಸಿ ಚಿರತೆ ಹಾಗೂ ಮುಳ್ಳಂದಿಯನ್ನು ಸುರಕ್ಷಿತವಾಗಿ ಬೋನಿನಲ್ಲಿ ಸೆರೆ ಹಿಡಿಯಲಾಯಿತು.
ಚಿರತೆಯನ್ನು ನೋಡಲು ಸುತ್ತ ಮುತ್ತಲ ಗ್ರಾಮಸ್ಥರು ತೀವ್ರ ಕುತೂಹಲದಿಂದ ಆಗಮಿಸಿ ಫೋಟೋ ಹಾಗೂ ಸೆಲ್ಫಿಯನ್ನು ತೆಗೆದುಕೊಳ್ಳುತ್ತಿದ್ದು ಕಂಡು ಬಂತು.