ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ಹೊಸದಿಗಂತ ವರದಿ ಅಂಕೋಲಾ:

ಅಪರಿಚಿತ ವಾಹನ ಬಡಿದು ಚಿರತೆಯೊಂದು ಮೃತ ಪಟ್ಟ ಘಟನೆ ಹೀರೆಗುತ್ತಿ ವಲಯ ಅರಣ್ಯ ವ್ಯಾಪ್ತಿಯ ಬೆಟ್ಕುಳಿ ಬಳಿ ಸಂಭವಿಸಿದೆ.
ಶುಕ್ರವಾರ ಬೆಳಿಗ್ಗಿನ ಜಾವ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಚಿರತೆಯ ಮೃತ ದೇಹ ಕಂಡು ಬಂದಿದ್ದು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಗುರುವಾರ ಮಧ್ಯರಾತ್ರಿ ಅಥವಾ ಶುಕ್ರವಾರ ಬೆಳಗಿನ ಜಾವ ಚಿರತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಯಾವುದೋ ವಾಹನ ಬಡಿದಿರುವ ಸಾಧ್ಯತೆ ಇದೆ. ಚಿರತೆಯ ಹೊಟ್ಟೆಯ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿರುವುದು ಕಂಡು ಬಂದಿದ್ದು ಪರೀಕ್ಷೆಗೆ ಕುಮಟಾ ಪಶು ವೈದ್ಯಕೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಹೀರೆಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಸಾಮಾನ್ಯವಾಗಿ ಚಿರತೆಗಳ ಓಡಾಟ ಇದೆ ಎನ್ನಲಾಗಿದೆ. ವಾಹನ ಬಡಿದು ಚಿರತೆ ಮೃತ ಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತ ಮುತ್ತಲಿನ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!