Tuesday, March 28, 2023

Latest Posts

ಯಲ್ಲಾಪುರದ ಸಾವಗದ್ದೆ ಬಳಿ ಚಿರತೆ ಅಸಹಜ ಸಾವು

ಹೊಸದಿಗಂತ ವರದಿ,ಯಲ್ಲಾಪುರ:

ತಾಲೂಕಿನ ಬಿಸಗೋಡ್ ಗಸ್ತಿನ, ಆನಗೋಡದಿಂದ ಸಾವಗದ್ದೆಗೆ ಹೋಗುವ ರಸ್ತೆಯ ಬಲಬದಿಯಲ್ಲಿ ಬುಧವಾರ ಅಸಹಜವಾಗಿ ಹೆಣ್ಣು ಚಿರತೆಯೊಂದು ಮೃತ ಪಟ್ಟಿದ್ದು, ಮಾಹಿತಿ ಬಂದ ತಕ್ಷಣ ಉಪ ಅರಣ್ಯ ಸಂರಕ್ಷಣಾಧಿಕಾರಿ , ಎಸ್.ಜಿ.ಹೆಗಡೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಹೆಚ್.ಎ ವಲಯ ಅರಣ್ಯಾಧಿಕಾರಿ ಎಲ್.ಎ ಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿಯಮಾನುಸಾರ ಸದರಿ ಚಿರತೆಯ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಶು ಆಸ್ಪತ್ರೆ ಯಲ್ಲಾಪುರಕ್ಕೆ ತರಲಾಯಿತು. ಅಸಹಜ ಚಿರತೆಯ ಸಾವಿಗೆ1972 ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ವಲಯ ಅರಣ್ಯಾಧಿಕಾರಿ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ನ್ಯಾಯಾಧೀಶರು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಫೀರ್ಯಾಧಿ ಸಲ್ಲಿಸಿರುತ್ತಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯಲ್ಲಾಪುರ ರವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಹೆಚ್ಚಿನ ತನಿಖೆ ಕೈ ಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!