ಮಣಿಪಾಲದಲ್ಲಿ ನೇರ ಮನೆಗೇ ನುಗ್ಗಿ ಕೋಳಿ ನುಂಗಿದ ಚಿರತೆ: ಭಯಾತಂಕದಲ್ಲಿದ್ದಾರೆ ನಾಗರಿಕರು

ಹೊಸದಿಗಂತ ಮಂಗಳೂರು:

ಉಡುಪಿ ಜಿಲ್ಲೆಯ ಮಣಿಪಾಲ ಪರಿಸರದ ಜನನಿಬಿಡ ಸ್ಥಳದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಚಿರತೆ, ಮನೆಯಲ್ಲಿದ್ದ ಕೋಳಿಯನ್ನು ತಿಂದು ತೆರಳಿರುವ ಆಘಾತಕಾರಿ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು, ನಗರವಾಸಿಗಳಲ್ಲಿ ಆತಂಕ ಉಂಟುಮಾಡಿದೆ.

ಮಣಿಪಾಲದ ಸರಳೆಬೆಟ್ಟು ಎಂಬಲ್ಲಿ ಐ ಘಟನೆ ನಡೆದಿದ್ದು, ಸೆರಳೆಬೆಟ್ಟು ಕೋಡಿ, ಎಂಡ್ ಪಾಯಿಂಟ್, ಕೆಳಪರ್ಕಕಳ, ಸಣ್ಣಕ್ಕಿ ಬೆಟ್ಟು, ಪರ್ಕಳ ಗ್ಯಾಟ್ಸನ್ ಪರಿಸರಗಳಲ್ಲಿ ಇದೇ ಚಿರತೆ ಆಗಾಗ ಪ್ರತ್ಯಕ್ಷವಾಗುತ್ತಾ ಭಯಹುಟ್ಟಿಸುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅವರ ಅನಿಸಿಕೆ ಪ್ರಕಾರ ಈ ಭಾಗದಲ್ಲಿ ಇನ್ನೂ ಎರಡು ಮೂರು ಚಿರತೆಗಳು ಇವೆ.

ಚಿರತೆಯನ್ನು ಸೆರೆ ಹಿಡಿಯಲು ಇತ್ತೀಚೆಗೆ ಸರಳೆಬೆಟ್ಟು ಕೋಡಿ ಪರಿಸರದಲ್ಲಿ ಬೋನನ್ನು ಇರಿಸಲಾಗಿತ್ತು. ಆದರೆ ಚಾಲಾಕಿ ಚಿರತೆ ಬೋನಿನ ಕಡೆಗೂ ಸುಳಿಯದೆ ಮನೆಗಳಿಗೆ ನುಗ್ಗಿ ಕೋಳಿಗಳನ್ನು ಸ್ವಾಹಾ ಮಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!