September 20, 2026
Sunday, September 20, 2026
spot_img

ಒಂದೇ ಒಂದು Rapido ರೈಡ್‌ನಿಂದ ಜೀವನವೇ ಹಾಳಾಗಿ ಹೋಯ್ತು! ಪೋಸ್ಟ್‌ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಂದಿನಂತೆಯೇ Rapido ಬೈಕ್‌ ಬುಕ್‌ ಮಾಡಿಕೊಂಡೆ, ಯಾವ ದರಿದ್ರ ಘಳಿಗೆಯಲ್ಲಿ ಈ ನಿರ್ಧಾರ ಕೈಗೊಂಡೇನೋ ನನ್ನ ಜೀವನವೇ ಹಾಳಾಗಿ ಹೋಯ್ತು ಎಂದು ಟೆಕ್ಕಿಯೊಬ್ಬರು ಪೋಸ್ಟ್‌ ಮಾಡಿದ್ದು, ಇದು ಎಲ್ಲೆಡೆ ವೈರಲ್‌ ಆಗಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಸಾನಿಕೃಷ್ಣ Rapido ಬುಕ್‌ ಮಾಡಿಕೊಂಡಿದ್ದರು. ಬಾಗ್ಮನೆ ಟೆಕ್‌ ಪಾರ್ಕ್‌ ಸಮೀಪ ಟ್ರ್ಯಾಕ್ಟರ್‌ ಒಂದನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಸಾನಿಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದರು.

ಚಿಕಿತ್ಸೆಗೆ 20 ಲಕ್ಷ ರೂಪಾಯಿ ಖರ್ಚು

ವಿಡಿಯೋ ಮೂಲಕ ವಿಷಯವನ್ನು ಹೇಳಿಕೊಂಡಿರುವ ಸಾನಿಕೃಷ್ಣ, ಈ ಅಪಘಾತ ಸಂಭವಿಸಿ ಎರಡು ತಿಂಗಳಾಗಿದೆ, ಎರಡು ತಿಂಗಳಿನಿಂದಲೂ ಆಸ್ಪತ್ರೆಯ ಬಿಳಿ ಗೋಡೆಗಳನ್ನು ಮಾತ್ರ ನೋಡಿದ್ದೀನಿ. ಚಿಕಿತ್ಸೆಗೆ 20 ಲಕ್ಷ ಖರ್ಚಾಗಿದೆ. ಆದರೆ Rapidoಗೆ ಕನಿಷ್ಠ ಕಾಳಜಿ ಕೂಡ ಇಲ್ಲ. ಪೋಸ್ಟರ್‌ನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವ ಕಂಪನಿಯಲ್ಲಿಯೇ ಹೀಗಾದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಒಂಬತ್ತು ಪಕ್ಕೆಲುಬು ಮುರಿದುಹೋಗಿದೆ!

ಬಾಗ್ಮನೆ ಟೆಕ್ ಪಾರ್ಕ್​ ಬಳಿ Rapido ಬೈಕ್ ನಲ್ಲಿ ಬರುವಾಗ ಸವಾರನ ನಿರ್ಲಕ್ಷ್ಯದಿಂದಾಗಿ ಟ್ರ್ಯಾಕ್ಟರ್ ಹಿಂದಿಕ್ಕುವ ಭರದಲ್ಲಿ ಅಪಘಾತವೆಸಗಿದ್ದ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ಧಾರೆ. ನಾನು ಗುಲ್ಮ ಶಸ್ತ್ರಚಿಕಿತ್ಸೆಗೆ (ಸ್ಪ್ಲೇನೆಕ್ಟಮಿ) ಒಳಗಾಗಿದ್ದೆ. ಯಕೃತ್ತಿಗೆ ತೀವ್ರ ಹಾನಿಯಾಗಿದೆ. 9 ಪಕ್ಕೆಲುಬುಗಳು ಮುರಿದಿದ್ದವು. ಶ್ವಾಸಕೋಶ ಹಾಗೂ ಮುಖಕ್ಕೆ ಗಾಯವಾಗಿದೆ. ಚಿಕಿತ್ಸಾ ವೆಚ್ಚ 20 ಲಕ್ಷ ದಾಟಿದೆ. ಚಿಕಿತ್ಸೆ ಮುಂದುವರೆಸಲು ಹಾಗೂ ಜೀವನ ಪೂರ್ತಿ ಆರೋಗ್ಯ ಸುಧಾರಿಸಲು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಣ ಹೊಂದಿಸುವುದು ಕಷ್ಟಕರವಾಗಿದೆ ಎಂದು ವಿಡಿಯೋದಲ್ಲಿ ಮಹಿಳೆ ನೋವು ತೋಡಿಕೊಂಡಿದ್ದಾರೆ.

ಪರಿಹಾರ ನೀಡಿಲ್ಲ!

ಅಪಘಾತ ಪ್ರಕರಣವನ್ನು ಮೈಕ್ರೋ ಇನ್​ಶ್ಯೂರೆನ್ಸ್​ ಆ್ಯಪ್​ಗೆ ವರ್ಗಾಯಿಸಲು ಯತ್ನಿಸಿದ್ದಾರೆ ಹೊರತು ಪರಿಹಾರ ನೀಡುವ ಕೆಲಸವಾಗಿಲ್ಲ. ನನ್ನಂತೆ ಹಲವು ಮಂದಿ ಪ್ರಕರಣದಲ್ಲಿ ಬಲಿಪಶುವಾಗಿದ್ಧಾರೆ. ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ರಾಪಿಡೋ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇನೆ ಎಂದಿದ್ಧಾರೆ.

Rapido ಪ್ರತಿಕ್ರಿಯೆ:

ಅಪಘಾತದ ಬಗ್ಗೆ ವಿಷಾದಿಸುತ್ತೇವೆ, ನಿಮ್ಮ ಕಾಳಜಿ ನಮಗೆ ಅರ್ಥವಾಗಿದೆ. ಘಟನೆ ಬಗ್ಗೆ ಎಲ್ಲ ವಿಷಯಗಳನ್ನು ಕಲೆಹಾಕುತ್ತಿದ್ದೇವೆ. ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರುವಂತೆ ಸಾಮಾಜಿಕ ಜಾಲತಾಣದಲ್ಲಿ Rapido ಪ್ರತಿಕ್ರಿಯೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !