ಜೀವಕ್ಕೆ ಕುತ್ತು ತಂದ ಆನ್ ಲೈನ್ ನಲ್ಲಿ ಲೋನ್: ಟಾರ್ಚರ್ ತಾಳಲಾರದೇ ಆತ್ಮಹತ್ಯೆಗೈದ ವಿದ್ಯಾರ್ಥಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆನ್ ಲೈನ್ ನಲ್ಲಿ ಲೋನ್ ಸಿಗುತ್ತೆ ಎಂದು ಖುಷಿಯಲ್ಲಿ ಯಾವುದೇ ಯೋಚನೆ ಮಾಡದೇ ಲೋನ್ ತಗೊಳ್ಳುವರು ಹೋಗುವ ಮುನ್ನ ಈ ಸುದ್ದಿ ಓದಿ. ಆನ್ ಲೈನ್ ನಲ್ಲಿ ಸಾಲ ಪಡೆದ ವಿದ್ಯಾರ್ಥಿ ಟಾರ್ಚರ್ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ವಿದ್ಯಾರ್ಥಿಯನ್ನು ತೇಜಸ್ ಎಂದು ಗುರುತಿಸಲಾಗಿದೆ.

ಈತ ಸ್ನೇಹಿತ ಮಹೇಶ್ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದನು. ಆದರೆ ಕಳೆದ 1 ವರ್ಷದಿಂದ ಸ್ನೇಹಿತ ಮಹೇಶ್ ಸಾಲದ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ನೀಡಿದವರು ತೇಜಸ್ ಗೆ ಟಾರ್ಚರ್ ನೀಡಿದ್ದು, ಇದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನನ್ನ ತಪ್ಪಿಗೆ ಬೇರೆ ದಾರಿಯಿಲ್ಲ , ಸಾಲ ತೀರಿಸಲು ಆಗುವುದಿಲ್ಲ, ಅಪ್ಪ ಅಮ್ಮ ನನ್ನನ್ನ ಕ್ಷಮಿಸಿ., ಇದು ನನ್ನ ಕೊನೆ ತೀರ್ಮಾನ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!