ಸ್ವಾಮಿ ವಿವೇಕಾನಂದರ ಕುರಿತು ಅವಹೇಳನ: ಆಧ್ಯಾತ್ಮಿಕ ಭಾಷಣಕಾರ ಮೋಘ ಲೀಲಾ ದಾಸ್‌ಗೆ ನಿಷೇಧ ಹೇರಿದ ಇಸ್ಕಾನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ವಾಮಿ ವಿವೇಕಾನಂದ (Swami Vivekananda) ಮತ್ತು ರಾಮಕೃಷ್ಣ ಪರಮಹಂಸ (Ramakrishna Paramahamsa) ಅವರನ್ನು ಅವಹೇಳನ ಮಾಡಿದ್ದ ಕಾರಣ ಆಧ್ಯಾತ್ಮಿಕ ಭಾಷಣಕಾರ ಅಮೋಘ ಲೀಲಾ ದಾಸ್ (Monk Amogh Lila Das) ಅವರಿಗೆ ಇಸ್ಕಾನ್‌ (ISKCON) 1 ತಿಂಗಳ ನಿಷೇಧವನ್ನು ಹೇರಿದೆ.

ಇತ್ತೀಚಿಗೆ ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದರು. ದೈವಿಕ ವ್ಯಕ್ತಿಯು ಪ್ರಾಣಿಯನ್ನು ಕೊಂದು ಅದನ್ನು ತಿನ್ನುತ್ತಾನೆಯೇ? ಅವನು ಮೀನು ತಿನ್ನುತ್ತಾನೆಯೇ? ಮೀನು ಕೂಡ ನೋವು ಅನುಭವಿಸುತ್ತದೆ. ಮತ್ತು ವಿವೇಕಾನಂದರು ಮೀನು ತಿಂದರೆ, ದೈವಿಕ ವ್ಯಕ್ತಿ ಮೀನು ತಿನ್ನಬಹುದೇ ಎಂದು ಪ್ರಶ್ನಿಸಿದ್ದರು.

ಒಬ್ಬ ದೈವಿಕ ಮಾನವನ ಹೃದಯದಲ್ಲಿ ದಯೆ ಇರುತ್ತದೆ. ಬದನೆಕಾಯಿ ನಮ್ಮ ಹಸಿವನ್ನು ನೀಗಿಸುತ್ತದೆ. ಹಾಗೆಂದ ಮಾತ್ರಕ್ಕೆ ತುಳಸಿಗಿಂತ ಬದನೆ ಉತ್ತಮ ಎಂದು ಹೇಳಬಹುದೇ? ಅಥವಾ ಭಗವದ್ಗೀತೆ ಅಧ್ಯಯನಕ್ಕಿಂತ ಫುಟ್ಬಾಲ್ ಆಡುವುದು ಮುಖ್ಯ ಎಂದು ಹೇಳುವುದು ಸರಿಯೇ?. ಸ್ವಾಮಿ ವಿವೇಕಾನಂದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ಇಲ್ಲೇ ಇದ್ದಿದ್ದರೆ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳುವ ಎಲ್ಲವನ್ನೂ ನಾವು ಕುರುಡಾಗಿ ನಂಬಬಾರದು ಎಂದು ಹೇಳಿದ್ದರು.

ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅಮೋಘ ಲೀಲಾ ದಾಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ನೆಟ್ಟಿಗರಿಂದ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇಸ್ಕಾನ್‌ ಅಮೋಘ ಲೀಲಾ ದಾಸ್ ಅವರ ಪ್ರವಚನಗಳಿಗೆ 1 ತಿಂಗಳ ಮಟ್ಟಿಗೆ ನಿಷೇಧ ಹೇರಿದೆ.

ಅಮೋಘ ಲೀಲಾ ದಾಸ್ ಯಾರು?
43 ವರ್ಷದ ಅಮೋಘ ಲೀಲಾ ದಾಸ್ ಸನ್ಯಾಸಿಯಾಗಿದ್ದು 12 ವರ್ಷಗಳಿಂದ ಇಸ್ಕಾನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಪ್ರಸ್ತುತ ಇಸ್ಕಾನ್‌ನ ದ್ವಾರಕಾ ಚಾಪ್ಟರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!