ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರೆಡ್‌ಮಿಲ್ ಇತ್ತೀಚೆಗೆ ಮಹಿಳೆಯರು ಪುರುಷರೆನ್ನದೆ ಫಿಟ್‌ನೆಸ್‌ಗಾಗಿ ಬಳಸುವ ವ್ಯಾಯಾಮದ ಯಂತ್ರ. ಇದರಲ್ಲಿ ವ್ಯಾಯಾಮ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸ್ವಲ್ಪ ಎಚ್ಚರ ತಪ್ಪಿದ್ರೂ ಕೆಳಗೆ ಬೀಳುವುದು ಗ್ಯಾರೆಂಟಿ. ಆದರೆ ಇಲ್ಲೊಂದು ಪುಟ್ಟ ಹುಡುಗಿ ತನ್ನ ಮುದ್ದಿನ ಬೆಕ್ಕಿಗೆ ಟ್ರೆಡ್‌ಮಿಲ್‌ನಲ್ಲಿ ಹೇಗೆ ನಡೆಯಬೇಕು ಎಂಬುದ್ನು ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಯೋಧಾ 4ಎವರ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಶೇರ್ ಆಗಿರುವ ಈ ವಿಡಿಯೋವನ್ನು ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 49 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಪುಟ್ಟ ಮಗುವೊಂದು ಟ್ರೆಡ್‌ಮಿಲ್‌ನಲ್ಲಿ ನಡೆಯುವುದನ್ನು ಕಾಣಬಹುದು. ಮಗು ತನ್ನ ಮುದ್ದಿನ ಬೆಕ್ಕಿಗೆ ಟ್ರೆಡ್‌ಮಿಲ್‌ನಲ್ಲಿ ಹೇಗೆ ನಡೆಯಬೇಕು ಎಂದು ತೋರಿಸುವುದು ಆಕರ್ಷಕವಾಗಿದೆ. ಮಗುವನ್ನು ಅನುಸರಿಸಿದ ಬೆಕ್ಕು ಕೂಡಾ ಟ್ರೆಡ್‌ಮಿಲ್ ಮೇಲೆ ನಡೆಯಲು ಪ್ರಯತ್ನಿಸಿ ವಿಫಲವಾಗಿದೆ.
Little girl teaches a cat how to use a treadmill..🐈👼😍
🎥: tt | danieIIesanford67 pic.twitter.com/KpvzHLJZGd
— 𝕐o̴g̴ (@Yoda4ever) November 1, 2022