August 30, 2026
Sunday, August 30, 2026
spot_img

ಬಿಯರ್‌ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ 15 ಲಕ್ಷ ಮೌಲ್ಯದ ಮದ್ಯ ಮಣ್ಣುಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಯರ್‌ ಸಾಗಿಸುತ್ತಿದ್ದ ಮದ್ಯದ ಲಾರಿ ಪಲ್ಟಿಯಾಗಿದ್ದು, ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಮದ್ಯ ಮಣ್ಣುಪಾಲಾದ ಘಟನೆ ಹಾಸನದಲ್ಲಿ ನಡೆದಿದೆ.

ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ 1100 ಬಿಯರ್ ಬಾಟಲ್ ತುಂಬಿದ ಲಾರಿ ತೆರಳುತ್ತಿತ್ತು. ದೊಡ್ಡಪುರ ಗ್ರಾಮದ ಬಳಿ ಲಾರಿಯ ಟೈಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ.

ಲೆಜೆಂಡ್, ರಾಯಲ್, ಪವರ್ ಕೂಲ್, ಸನ್ನಿ ಬೀಚಸ್ ಕಂಪನಿಯ ಬಿಯರ್‌ಗಳು ಬಾಟೆಲ್‌ಗಳು , ಟಿನ್‌ಗಳು ರಸ್ತೆಯಲ್ಲೆಲ್ಲಾ ಚೆಲ್ಲಾಡಿವೆ. ಒಂದು ಬದಿಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !