ರಸ್ತೆಯಲ್ಲಿ ಹಾವು ಕಂಡು ಬ್ರೇಕ್ ಹಾಕಿದ ಲಾರಿ ಚಾಲಕ: ಭೀಕರ ಸರಣಿ ಅಪಘಾತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹೆದ್ದಾರಿಯಲ್ಲಿ ಏಕಾಏಕಿ ಹಾವೊಂದು ಅಡ್ಡಬಂದ ಪರಿಣಾಮ ಲಾರಿ ಚಾಲಕ ಸಡನ್ ಬ್ರೇಕ್ ಹಾಕಲು ಹೋಗಿ ಭೀಕರ ಸರಣಿ ಅಪಘಾತ ಸಂಭವಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲಗುರ್ಕಿ ಬಳಿ ನಡೆದಿದೆ.
ಸಂಚಾರದ ವೇಳೆ ಹಾವನ್ನು ತಪ್ಪಿಸಲು ಲಾರಿ ಚಾಲಕ ದಿಢೀರನೇ ಬ್ರೇಕ್ ಹಾಕುತ್ತಿದ್ದಂತೆ ಸರಣಿ ಅಪಘಾತ ಸಂಭವಿಸಿದೆ. ಲಾರಿ, ಟಾಟಾ ಏಸ್, ಕಾರು ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ.
ಟಿಪ್ಪರ್ ಚಾಲಕ ಟಿಪ್ಪರ್ ಒಳಗೆ ಸಿಲುಕಿಕೊಂಡಿದ್ದು ಹೊರಬರಲಾಗದೇ ಪರದಾಡುತ್ತಿದ್ದು, ಚಾಲಕನನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಇನ್ನೊಂದೆಡೆ ಸರಣಿ ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸಿದೆ. ವಾಹನ ಸವಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!