June 29, 2026
Monday, June 29, 2026
spot_img

ಮನೆಯವರಿಗೆ ಮದುವೆ ಇಷ್ಟವಿಲ್ಲವೆಂದು ಅವಾಯ್ಡ್‌ ಮಾಡಿದ ಪ್ರೇಯಸಿಯ ಕತ್ತು ಕೊಯ್ದ ಪ್ರಿಯಕರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆಗೆ ಒಪ್ಪದೇ ಅವಾಯ್ಡ್‌ ಮಾಡ್ತಿದ್ದ ಪ್ರೇಯಸಿಯನ್ನು ಪ್ರಿಯಕರ ಮರ್ಡರ್‌ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಂಜಲಿ ಹಾಗೂ ರಾಜೀವ್‌ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಒಂದೇ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಾಗಿತ್ತು. ಇವರ ಪ್ರೀತಿಯ ವಿಷಯ ಮನೆಯವರಿಗೂ ತಿಳಿದಿತ್ತು. ರಾಜೀವ್‌ಗೆ ಕ್ರಿಮಿನಲ್‌ ಹಿನ್ನಲೆ ಇದ್ದ ಕಾರಣ ಅಂಜಲಿ ಪೋಷಕರು ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಪೋಷಕರನ್ನು ನಂತರ ಒಪ್ಪಿಸೋಣ ಮದುವೆಯಾಗೋಣ ಎಂದು ರಾಜೀವ್‌ ಬೇಡಿಕೊಂಡಿದ್ದ. ಆದರೆ ಅಂಜಲಿ ತನ್ನ ಪೋಷಕರ ಮಾತನ್ನು ಕೇಳಿ ಮದುವೆ ಬೇಡ ಎಂದು ಡಿಸೈಡ್‌ ಮಾಡಿದ್ದಳು. ರಾಜೀವ್‌ನನ್ನು ಅವಾಯ್ಡ್‌ ಮಾಡಿದ್ದಳು.

ನಿನ್ನೆ ರಾತ್ರಿ ರಾಜೀವ್‌ ಅಂಜಲಿಯನ್ನು ಊಟಕ್ಕೆಂದು ಮನೆಗೆ ಕರೆಸಿಕೊಂಡಿದ್ದಾನೆ. ಆನಂತರ ಮದುವೆ ವಿಚಾರ ಆರಂಭಿಸಿ ಗಲಾಟೆ ಮಾಡಿದ್ದಾನೆ. ಜಗಳ ತಾರಕಕ್ಕೇರಿದ್ದು, ನಂತರ ಅಂಜಲಿಯನ್ನು ಪೈಪ್‌ಲೈನ್‌ ರಸ್ತೆಯ ಬಳಿ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂಜಲಿ ಮೃತಪಟ್ಟಿದ್ದು, ಆರೋಪಿ ರಾಜೀವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !