ಕೇದಾರನಾಥದಲ್ಲಿ ತಪ್ಪಿತು ಭಾರೀ ಅವಘಡ, ಗಾಳಿಯಲ್ಲೇ ಕೆಟ್ಟು ನಿಂತ ಹೆಲಿಕಾಪ್ಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇದಾರನಾಥನ ದರುಶನಕ್ಕೆ ಇದೀಗ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಟ್ರೆಕ್ಕಿಂಗ್‌, ಕುದುರೆ ಸವಾರಿ ಹಾಗೂ ಹೆಲಿಕಾಪ್ಟರ್‌ನಲ್ಲಿ ಜನರು ಕೇದಾರನಾಥ್‌ಗೆ ಆಗಮಿಸುತ್ತಾರೆ. ಇದೀಗ ಹೆಲಿಕಾಪ್ಟರ್‌ವೊಂದು ಗಾಳಿಯ‌ಲ್ಲೇ ಕೆಟ್ಟು ನಿಂತಿದೆ.

ಕೇದಾರನಾಥ ಧಾಮಕ್ಕೆ 6 ಜನರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕದೋಷ ಕಂಡುಬಂದ ಹಿನ್ನೆಲೆ ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ.

ಚಾರ್‌ಧಾಮ್ ಯಾತ್ರೆ ಮುಂದುವರೆದಿದ್ದು ಲಕ್ಷಾಂತರ ಜನರು ಭೇಟಿನೀಡಿದ್ದಾರೆ. ಇಲ್ಲಿಯವರೆಗೆ 3,40,000 ಯಾತ್ರಿಕರು ಗಂಗೋತ್ರಿ- ಯಮುನೋತ್ರಿಗೆ, ಬದರಿನಾಥಕ್ಕೆ 1,77,749 ಭಕ್ತರು ಬಂದಿದ್ದಾರೆ.
ನಿಷೇಧಾಜ್ಞೆ ನಡುವೆಯೂ ದೇವಾಲಯದ ಆವರಣದಲ್ಲಿ ವಿಡಿಯೋ ಮಾಡುತ್ತಿದ್ದ 37 ಜನರ ಮೇಲೆ ಚಲನ್ ಜಾರಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!