July 23, 2026
Thursday, July 23, 2026
spot_img

ಭಾರತವನ್ನು ಮಣಿಸಿ ಇತಿಹಾಸ ಬರೆದ ಬೆನ್ನಲ್ಲೇ ಐರ್ಲೆಂಡ್ ಕ್ರಿಕೆಟ್‌ನಲ್ಲಿ ಮಹಾ ಟ್ವಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಲ್‌ಫಾಸ್ಟ್‌ನಲ್ಲಿ ಭಾನುವಾರ ನಡೆದ ರೋಮಾಂಚಕ ಎರಡನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ತಂಡವು ಭಾರತವನ್ನು 1 ರನ್‌ನಿಂದ ಮಣಿಸಿತು. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಸೃಷ್ಟಿಸಿತು. ಇದು ಐರಿಶ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸರಣಿ ಗೆಲುವಾಗಿದೆ.

ಗೆಲುವಿನ ಬೆನ್ನಲ್ಲೇ ದಿಢೀರ್ ಆಘಾತ

ಭಾರತ ವಿರುದ್ಧದ ಈ ಮಹಾ ವಿಜಯವನ್ನು ಐರಿಶ್ ಅಭಿಮಾನಿಗಳು ಆಚರಿಸುತ್ತಿರುವಾಗಲೇ ಸೋಮವಾರದಂದು ಮುಖ್ಯ ಕೋಚ್ ಹೆನ್ರಿಕ್ ಮಲನ್ ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಕ್ರಿಕೆಟ್ ಐರ್ಲೆಂಡ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.

ರಾಜೀನಾಮೆಗೆ ಅಸಲಿ ಕಾರಣವೇನು?

ಮಲನ್ ಅವರ ಒಪ್ಪಂದವು 2027ರ ಅವಧಿಯವರೆಗೂ ಇತ್ತು. ಆದರೆ ಮುಂಬರುವ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಹೊಸ ತರಬೇತುದಾರರು ತಂಡವನ್ನು ಸಜ್ಜುಗೊಳಿಸಲು ಸೂಕ್ತ ಸಮಯ ಸಿಗಲಿ ಎಂಬ ಕಾರಣಕ್ಕೆ ಅವರು ಅವಧಿಗೂ ಮುನ್ನವೇ ನಿರ್ಗಮಿಸಿದ್ದಾರೆ. “ತಂಡದ ಸಾಧನೆಯಿಂದ ನಾನು ತೃಪ್ತನಾಗಿದ್ದೇನೆ, ಹೊಸ ಕೋಚ್‌ಗೆ ದಾರಿ ಮಾಡಿಕೊಡಲು ಇದು ಸರಿಯಾದ ಸಮಯ” ಎಂದು ಮಲನ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !