Thursday, February 2, 2023

Latest Posts

CRIME| ಆರ್ಡರ್‌ ತಡವಾಗಿದ್ದಕ್ಕೆ ಫುಡ್ ಡೆಲಿವರಿ ಬಾಯ್ ಮೇಲೆ 15 ಮಂದಿ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್ ನ ಹುಮಾಯೂನ್ ನಗರದಲ್ಲಿ ದುಷ್ಕೃತ್ಯ ನಡೆದಿದೆ. 15 ಮಂದಿ ಅನುಯಾಯಿಗಳೊಂದಿಗೆ ಬಂದ ವ್ಯಕ್ತಿಯೊಬ್ಬ ಫುಡ್ ಡೆಲಿವರಿ ಬಾಯ್ ಮೇಲೆ ನಿನ್ನೆ ರಾತ್ರಿ ಹಲ್ಲೆ ನಡೆಸಿದ್ದಾನೆ. ಆರ್ಡರ್ ವಿಳಂಬ ಮಾಡಿದ್ದಕ್ಕೆ ಫುಡ್ ಡೆಲಿವರಿ ಬಾಯ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಭಯದಿಂದ ಫುಡ್‌ ಡೆಲಿವರಿ ಬಾಯ್ ಹೋಟೆಲ್ ಒಳಗೆ ಹೋದರೂ ಬಿಡದ ಯುವಕರು ಹೋಟೆಲ್‌ಗೆ ನುಗ್ಗಿ ಡೆಲಿವರಿ ಬಾಯ್‌ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ಮೇಲೆ ಕುದಿಯುವ ಎಣ್ಣೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಡೆಲಿವರಿ ಬಾಯ್ ಜೊತೆಗೆ ಇತರ ಮೂವರು ಗಾಯಗೊಂಡಿದ್ದಾರೆ. ಆದರೆ, ಪೊಲೀಸರ ಸಮ್ಮುಖದಲ್ಲೇ ಘರ್ಷಣೆ ನಡೆದಿದೆ ಎಂದು ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!