ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನಾದರು ಹೊಸದಾಗಿ ಟ್ರೈ ಮಾಡಬೇಕೆಂದು ಯೋಚಿಸುವವರು ಹೆಚ್ಚು ಮಂದಿ ತಮ್ಮ ಪ್ರಾಣವನ್ನೂ ಲೆಕ್ಕಿಸಿವುದಿಲ್ಲ. ಅದರಲ್ಲಿ ಕೆಲವರು ಸಕ್ಸಸ್ ಆಗಿದ್ದರೂ ಸ್ವಲ್ಪಮಟ್ಟಿಗೆ ಪ್ರಾಣಗಳನ್ನು ಬಿಟ್ಟುಬಿಡುತ್ತಾರೆ. ಇಂಥದ್ದೇ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೆಲವು ವ್ಯಕ್ತಿಗಳು ರಸ್ತೆಗಳ ಮೇಲೆ ಬೈಕ್ ವಿನ್ಯಾಸಗಳನ್ನು ಮಾಡಿದರೆ, ಇನ್ನೂ ಕೆಲವರು ಹಗ್ಗದ ಮೇಲೆ ಸ್ಟಂಟ್ಸ್ ಮಾಡುತ್ತಾರೆ. ಇನ್ನೂ ಕೆಲವರು ಬೆಟ್ಟ-ಗುಟ್ಟ, ದೊಡ್ಡ ಕಟ್ಟಡಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಿಜವಾಗ್ಲೂ ಇದು ತುಂಬಾ ಅಪಾಯಕಾರಿ, ಇದರಲ್ಲಿ ಚಿಕ್ಕ ತಪ್ಪಾದರೂ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಇದೀಗ ಅಂತಹ ಒಂದು ಸ್ಟಂಟ್‌ಗೆ ಸಂಬಂಧಿಸಿದ ವೀಡಿಯೊ ಸದ್ದು ಮಾಡುತ್ತಿದೆ.
ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಓಡುತ್ತಾ ಓಡುತ್ತಾ ಎತ್ತರದ ಬೆಟ್ಟದಿಂದ ಜಿಗಿಯುತ್ತಾನೆ. ಸ್ವಲ್ಪ ಸಮಯದವರೆಗೆ ಆತನ ಪ್ಯಾರಾಚೂಟ್ ತೆರೆಯಲಿಲ್ಲ. ಇನ್ನು ಒಂದು ಸ್ವಲ್ಪ ತಡವಾಗಿದ್ದರೂ ಆವನ ಪ್ರಾಣ ಗಾಳಿಯಲ್ಲಿ ತೇಲುತ್ತಿತ್ತು. ಕೊನೆಯ ಕ್ಷಣದಲ್ಲಿ ಪ್ಯಾರಾಚೂಟ್ ತೆರೆದು ಯುವಕನ ಪ್ರಾಣ ರಕ್ಷಿಸಿದೆ. ಯಾರಾದರೂ ಸರಿಯೇ ಇಂತಹ ಅಪಾಯಕಾರಿ ಸ್ಟಂಟ್ಸ್‌ಗೆ ಕೈ ಹಾಕುವ ಮೊದಲು ಹತ್ತು ಹಲವು ಬಾರಿ ಯೋಚಿಸುವುದು ಉತ್ತಮ.
Bro was 2 flips away from visiting the afterlife 😳 pic.twitter.com/M4FTD8WTbb
— MadVids (@MadVidss) September 12, 2023