ಗೂಗಲ್‌ನಿಂದ ನೂರಾರು ಉದ್ಯೋಗಿಗಳ ಲೇ ಆಫ್, ಅಮೆರಿಕದಲ್ಲಿ ನಿರುದ್ಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೂಗಲ್ ಮಾತೃಕಂಪನಿ ಆಲ್ಫಬೆಟ್‌ನಲ್ಲಿ ನೂರಾರು ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಬಿದ್ದಿದ್ದು, ಅಮೆರಿಕದಲ್ಲಿ ಮತ್ತೆ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ.

ಈ ಹಿಂದೆ ಆಲ್ಫಬೆಟ್ ಸಾವಿರಕ್ಕೂ ಹೆಚ್ಚು ಮಂದಿಯನ್ನು ಲೇ ಆಫ್ ಮಾಡಿತ್ತು. ಈ ಬಾರಿ ನೂರಕ್ಕಿಂತ ಹೆಚ್ಚು ಮಂದಿಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ.

ದೊಡ್ಡ ಟೆಕ್ ಕಂಪನಿಯಾದ ಆಲ್ಫಬೆಟ್ ಜನವರಿಯಲ್ಲಿ 12,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಅಮೆರಿಕದಲ್ಲಿ ದೊಡ್ಡ ಕಂಪನಿಗಳಲ್ಲಿ ಲೇ ಆಫ್ ಪರ್ವ ನಡೆಯುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ. ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!