Thursday, February 2, 2023

Latest Posts

SHOCKING NEWS | ಸಾಕಿದ ನಾಯಿಯನ್ನು ‘ನಾಯಿ’ ಎಂದಿದ್ದಕ್ಕೆ ವ್ಯಕ್ತಿ ಕೊಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಕು ನಾಯಿಯನ್ನು ನಾಯಿ ಎಂದು ಕರೆದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ನಾಯಿ ಮಾಲೀಕರು ಕೊಂದಿದ್ದಾರೆ. ದಿಂಡಿಗಲ್‌ನಲ್ಲಿ ಘಟನೆ ನಡೆದಿದೆ. ಸಾಕು ನಾಯಿಯ ಮಾಲೀಕರಾದ ನಿರ್ಮಲಾ ಫಾತಿಮಾ ರಾಣಿ ಹಾಗೂ ಅವರ ಮಕ್ಕಳಾದ ಡೇನಿಯಲ್ ಹಾಗೂ ವಿನ್ಸೆಂಟ್, ರಾಯಪ್ಪನ್‌ಗೆ ಎನ್ನುವವರಿಗೆ ತಮ್ಮ ನಾಯಿಯನ್ನು ನಾಯಿ ಎಂದು ಕರೆಯಬೇಡಿ, ಹೆಸರು ಹಿಡಿದು ಕರೆಯಿರಿ ಎಂದು ಸಾಕಷ್ಟು ಬಾರಿ ವಾರ್ನಿಂಗ್ ನೀಡಿದ್ದರು.

ನಾಯಿಯ ಮಾಲೀಕರಿಗೆ ಕೊಲೆಯಾದ ವ್ಯಕ್ತಿ ರಾಯಪ್ಪನ್ ನೆಂಟರೂ ಆಗಬೇಕಿತ್ತು, ಮೋಟರ್ ಹಾಕಿ ಬಾ ಎಂದು ರಾಯಪ್ಪನ್ ತಮ್ಮ ಮೊಮ್ಮಗನಿಗೆ ಹೇಳಿದ್ದಾರೆ. ಮೋಟರ್ ಹಾಕುವ ಸ್ಥಳದಲ್ಲಿ ನಾಯಿ ಇದೆ, ಸುರಕ್ಷತೆಗಾಗಿ ಒಂದು ಕೋಲು ಹಿಡಿದುಕೊಂಡು ಹೋಗು ಎಂದು ಹೇಳಿದ್ದಾರೆ.

ಇದನ್ನು ಕೇಳಿದ ಡೇನಿಯಲ್‌ಗೆ ಕೋಪಬಂದು ನಮ್ಮ ನಾಯಿಗೆ ಹೊಡೆಯೋದಕ್ಕೆ ಕೋಲು ತಂದಿದ್ದಾರೆ ಎಂದು ತಪ್ಪು ತಿಳಿದುಕೊಂಡು, ಸಿಟ್ಟಿನಲ್ಲಿ ಎದೆಗೆ ಗುದ್ದಿದ್ದಾರೆ. ರಾಯಪ್ಪನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆದರಿದ ಡೇನಿಯಲ್ ತಕ್ಷಣ ಓಡಿಹೋಗಿದ್ದಾರೆ. ಪೊಲೀಸರು ನಿರ್ಮಲಾ ಹಾಗೂ ಪುತ್ರರನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!