ಪ್ರಧಾನಿ ಮೋದಿ ಇದ್ದ ಕಾರ್ಯಕ್ರಮದಲ್ಲಿ ಪೆಂಡಾಲ್ ಸ್ಕ್ರೂ ತೆಗೆದ ವ್ಯಕ್ತಿ ? ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬನ್‌ಸ್ವಾರದಲ್ಲಿ ಪ್ರಧಾನಿ ಮೋದಿ ಸೇರಿ ಸಾಕಷ್ಟು ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಭಾಷಣ ಕೇಳುತ್ತಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ.

ಭಾಷಣ ಕೇಳುತ್ತಿದ್ದ ವ್ಯಕ್ತಿ ಏನೂ ಗೊತ್ತಿಲ್ಲದವನಂತೆ ಕೋಲುಗಳ ಬಳಿ ನಿಲ್ಲುತ್ತಾನೆ. ನಂತರ ಯಾರಿಗೂ ತಿಳಿಯದಂತೆ ಸ್ಕ್ರೂಗಳನ್ನು ಒಂದೊಂದಾಗಿ ಬಿಚ್ಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರಿವರನ್ನು ನೋಡುತ್ತಲೇ ತೆಗೆದ ಸ್ಕ್ರೂವನ್ನು ಪಕ್ಕದವರಿಗೆ ನೀಡುತ್ತಾರೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇವರು ಯಾರು? ಇವರ ಉದ್ದೇಶ ಏನಾಗಿತ್ತು ಎಂದು ಕೇಳುತ್ತಿದ್ದಾರೆ. ಪೊಲೀಸರು ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಮೊರ್ಬಿ ಸೇತುವೆಯ ದುರಂತದಲ್ಲಿಯೂ ಆಗಿರಬಹುದಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!